ಮೆಂತ್ಯೆ ಕಾಳಿನ ಬಾತ್

  • ಅರ್ಚನಾ ಬೊಮ್ನಳ್ಳಿ
    ಬೇಕಾಗುವ ಸಾಮಗ್ರಿ: ಕ್ಯಾಪ್ಸಿಕಂ ಒಂದು, ಬವಡೆ ಕಾಳು ಅರ್ಧ ಕಪ್, ಈರುಳ್ಳಿ ಒಂದು, ಅಕ್ಕಿ ಒಂದು ಕಪ್, ತೆಂಗಿನಕಾಯಿ ತುರಿ ಅರ್ಧ ಕಪ್, ಲವಂಗ, ಏಲಕ್ಕಿ ತಲಾ ಒಂದೊಂದು, ಚಕ್ಕೆ, ಶುಂಠಿ, ಸಣ್ಣ ಚೂರು, ಮೆಂತ್ಯಕಾಳು ಒಂದು ಚಮಚ, ಕೆಂಪುಮೆಣಸಿನಕಾಯಿ ಮೂರು, ಕೊತ್ತಂಬರಿಬೀಜ ಒಂದು ಚಮಚ, ಉಪ್ಪು, ಹುಳಿ ರುಚಿಗೆ ತಕ್ಕಷ್ಟು. ಒಗ್ಗರಣೆಗೆ ಎಣ್ಣೆ, ಸಾಸಿವೆಕಾಳು, ಸ್ವಲ್ಪ ಅರಿಶಿನಪುಡಿ, ಬೇವಿನಸೊಪ್ಪಿನ ಎಸಳು ಒಂದು.
    ವಿಧಾನ: ಬವಡೆ ಕಾಳನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಕೊಳ್ಳಿ. ಕುಕ್ಕರಿನಲ್ಲಿ ಒಗ್ಗರಣೆ ಎಣ್ಣೆ ಹಾಕಿ, ಸಾಸಿವೆಕಾಳು, ಅರಿಶಿನಪುಡಿ, ಬೇವಿನಸೊಪ್ಪು ಹಾಕಿ ಬೆಂದ ಮೇಲೆ ಕೊಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ನೆನೆಸಿದ ಬವಡೆಕಾಳು ಹಾಕಿ, ಒಂದೆರಡು ಸುತ್ತು ಹುರಿಯಿರಿ. ಕೆಂಪುಮೆಣಸಿನಕಾಯಿ, ಕೊತ್ತಂಬರಿಬೀಜ, ಮೆಂತ್ಯಕಾಳು, ಜೀರಿಗೆ, ಲವಂಗ, ಏಲಕ್ಕಿಯನ್ನು ಕಮ್ಮಗೆ ಹುರಿದುಕೊಂಡು ಕಾಯಿಯೊಂದಿಗೆ ರುಬ್ಬಿಕೊಳ್ಳಿ. ನಂತರ ಮೆದಲು ಹುರಿದುಕೊಂಡ ಪದಾರ್ಥಕ್ಕೆ ಅಕ್ಕಿಯನ್ನು ತೊಳೆದು ಹಾಕಿ, ರುಬ್ಬಿದ ಮಿಶ್ರಣ ಸೇರಿಸಿ, ಉಪ್ಪು, ಹುಳಿ, ಹಾಕಿ ಬೇಕಾಗುವಷ್ಟು ನೀರು ಸೇರಿಸಿ ಕುಕ್ಕರಿನ ಮುಚ್ಚಳ ಮುಚ್ಚಿ ಎರಡು ಕೂಗು ಕೂಗಿಸಿಕೊಳ್ಳಿ.

LEAVE A REPLY