ಬೆಳ್ತಂಗಡಿ ತಾಲೂಕಿನ ಅಂಗನವಾಡಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಸವಣಾಲು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ೦೧ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಸಹಾಯಕಿ ಹುದ್ದೆಗೆ ಧರ್ಮಸ್ಥಳ-ಕಂಚಿಮಾರು ಅಂಗನವಾಡಿ ಕೇಂದ್ರ, ದೊಂಡೋಲೆ ಅಂಗನವಾಡಿ ಕೇಂದ್ರ, ಬೆಳಾಲು ಗ್ರಾಮದ – ಸುರುಳಿ ಅಂಗನವಾಡಿ ಕೇಂದ್ರ, ಪಾರೆಂಕಿ ಗ್ರಾಮದ – ಹುಪ್ಪ ಅಂಗನವಾಡಿಕೇಂದ್ರ, ಬೆಳ್ತಂಗಡಿ ಕಸಬಾ – ಉದಯ ನಗರ ಅಂಗನವಾಡಿ ಕೇಂದ್ರ, ಬಳಂಜ – ಅಟ್ಲಾಜೆ ಅಂಗನವಾಡಿ ಕೇಂದ್ರ, ಕುವೆಟ್ಟು – ಸುಣ್ಣದಕೆರೆ ಅಂಗನವಾಡಿಕೇಂದ್ರ, ಪುತ್ತಿಲ – ಕೇರ್ಯ ಅಂಗನವಾಡಿಕೇಂದ್ರ, ಇಳಂತಿಲ – ಕನ್ಯಾರ ಕೋಡಿ ಅಂಗನವಾಡಿ ಕೇಂದ್ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ ೨ ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಕಾರಿಗಳ ಕಛೇರಿ, ಬೆಳ್ತಂಗಡಿ ದೂರವಾಣಿ ಸಂಖ್ಯೆ: ೦೮೨೫೬-೨೩೨೧೩೪ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

LEAVE A REPLY