ಅರಣ್ಯ ಇಲಾಖೆಯಲ್ಲಿ 240 ಅರಣ್ಯ ರಕ್ಷಕ ಮತ್ತು 329 ಅರಣ್ಯಾಧಿಕಾರಿ, ಮೋಜಣಿದಾರ ಹುದ್ದೆ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ೨೪೦ ಅರಣ್ಯ ರಕ್ಷಕ ಮತ್ತು ೩೨೯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ ಹುದ್ದೆಗಳ ನೇಮಕಾತಿಗೆ ಜೂನ್ ೧೪, ೨೦೧೭ರವರೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳ ವಿವರ: ಚಾಮರಾಜನಗರ ೬೦, ಕೊಡಗು ೫೦, ಕೆನರಾ ೬೦, ಮೈಸೂರು ೪೦, ಚಿಕ್ಕಮಗಳೂರು ೧೪, ಮಂಗಳೂರು ೧೦, ಹಾಸನ ೧೦, ಬೆಂಗಳೂರು ೧೪, ಶಿವಮೊಗ್ಗ ೩೦, ಒಟ್ಟು ೨೮೮ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳು ೪೧ ಸೇರಿ ೩೨೯.
ಅರ್ಹತೆ: ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ವಿವಿಯಲ್ಲಿ ಬಿಎಸ್‌ಸಿ (ಅರಣ್ಯಶಾಸ್ತ್ರ) ಅಥವಾ ಬಿಎಸ್‌ಸಿಯಲ್ಲಿ ಪದವೀಧರರಾಗಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಭೂಗರ್ಭಶಾಸ್ತ್ರ, ಇತ್ಯಾದಿ ಐಚ್ಚಿಕ ವಿಷಯಗಳಲ್ಲಿ ಅಭ್ಯಸಿಸಿರಬೇಕು.
ವೇತನ: ೧೨,೫೦೦ರಿಂದ ೨೪,೦೦೦ರವರೆಗೆ. ವಯೋಮಿತಿಯು ಕನಿಷ್ಠ ೧೮ರಿಂದ ಗರಿಷ್ಠ ೩೦ ವರ್ಷಗಳು (ಎಸ್‌ಸಿ, ಎಸ್‌ಟಿ, ಪ್ರವರ್ಗ-೧) ಗರಿಷ್ಠ ೨೮ ವರ್ಷಗಳು (೨ಎ, ೨ಬಿ, ೩ಎ, ೩ಬಿ) ಹಾಗೂ ಸಾಮಾನ್ಯ ವರ್ಗದವರಿಗೆ: ಗರಿಷ್ಠ ೩೮ ವರ್ಷಗಳು. ಮಾಜಿ ಸೈನಿಕರಿಗೆ ಅವರು ಸಲ್ಲಿಸಿದ ಸೇವಾವಯನ್ನು ಪರಿಗಣಿಸಿ ಅದಕ್ಕೆ ೩ ವರ್ಷಗಳನ್ನು ಸೇರಿಸಿದಾಗ ಎಷ್ಟಾಗುವುದೋ ಅಷ್ಟು ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ನೇಮಕಾತಿ ವಿಧಾನ: ಕರ್ನಾಟಕ ಅರಣ್ಯ ಇಲಾಖಾ ಸೇವೆಗಳ ನಿಯಮಾನುಸಾರ ಅರ್ಹ ಅಭ್ಯರ್ಥಿಗಳನ್ನು ಆನ್‌ಲೈನ್‌ನಲ್ಲಿ ನೀಡಿರುವ ಅರ್ಹತೆಯಾಧಾರದಲ್ಲಿ ವಿದ್ಯಾರ್ಹತೆಯನುಸಾರ ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಗಳಿಗೆ ದೇಹದಾರ್ಢ್ಯತೆ ಪರೀಕ್ಷೆಇರುತ್ತದೆ. ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ದೈಹಿಕ ಕಾರ್ಯಕ್ಷಮತಾ ಪರೀಕ್ಷೆಗೆ ಒಳಪಡಿಸಲಾಗುವುದು.
ಅರಣ್ಯ ರಕ್ಷಕ ಹುದ್ದೆಗಳಿಗೆ ೨ನೇ ಪಿಯುಸಿ ಅಥವಾ ೧೨ನೇ ತರಗತಿಯಲ್ಲಿ ತೇರ್ಗಡೆ. ವೇತನ: ರೂ.೧೧೬೦೦ರಿಂದ ೨೧,೦೦೦.ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಮೀಸಲಾತಿ ಮೇಲಿನಂತೆ ಅನ್ವಯವಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಯನ್ನು ಆನ್‌ಲೈನ್ ಮುಖಾಂತರ ಜೂನ್ ೧೪, ೨೦೧೭ರೊಳಗೆ ಸಲ್ಲಿಸಬೇಕು.
ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ||ಎ, ||ಬಿ, |||ಎ, |||ಬಿ ಪ್ರವರ್ಗಗಳಿಗೆ ರೂ. ೧೦೦ ಹಾಗೂ ಸೇವಾ ಶುಲ್ಕ ರೂ. ೧೫, ಪ.ಜಾ., ಪ.ಪಂ., ಪ್ರವರ್ಗ-೧ಕ್ಕೆ ರೂ. ೨೫ ಹಾಗೂ ಸೇವಾ ಶುಲ್ಕ ರೂ. ೧೫.ಇದನ್ನು ಇ-ಪಾವತಿ ಸೌಲಭ್ಯವಿರುವ ಅಂಚೆ ಕಚೇರಿಯಲ್ಲಿ ಮುದ್ರಿತ ಅರ್ಜಿ ಪ್ರತಿಯನ್ನು ತೋರಿಸಿ ಪಾವತಿಸತಕ್ಕದ್ದು. ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್‌ಸೈಟ್ ನೋಡುವುದು.

LEAVE A REPLY