ಕೆಲವೇ ಗಂಟೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಮೌಲ್ಯದ ಮಲ್ಲಿಗೆ ವ್ಯಾಪಾರ..!

ಪುತ್ತೂರು: ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ಮೌಲ್ಯದ ಮಲ್ಲಿಗೆ ವ್ಯಾಪಾರ. .!. ಇದು ನಡೆದದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರಾ ಉತ್ಸವದ ಸಂದರ್ಭ.
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ಬಲ್ನಾಡ್ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಭಾನುವಾರ ರಾತ್ರಿ ಪುತ್ತೂರು ದೇವಳಕ್ಕೆ ಆಗಮಿಸಿತು. ಉಳ್ಳಾಲ್ತಿ ಭಂಡಾರ ಆಗಮಿಸುವ ದಿನ ಮಲ್ಲಿಗೆ ಚೆಂಡನ್ನು ಹರಕೆ ರೂಪದಲ್ಲಿ ಸಮರ್ಪಣೆ ಮಾಡುತ್ತಾರೆ. ಈ ಕಾರಣದಿಂದಾಗಿ ಬೇರೆ ಬೇರೆ ಊರಿನ ಮಲ್ಲಿಗೆ ವ್ಯಾಪಾರಸ್ಥರು ಪುತ್ತೂರಿಗೆ ಆಗಮಿಸುತ್ತಾರೆ. ಹೀಗಾಗಿ ಕೆಲವೇ ಗಂಟೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಮೌಲ್ಯದ ಮಲ್ಲಿಗೆ ವ್ಯಾಪಾರವಾಗಿದೆ.

ಬಲ್ನಾಡು ದೈವಸ್ಥಾನದ ಭಂಡಾರದ ಕೊಟ್ಟಿಗೆಯಲ್ಲಿ ಭಾನುವಾರ ಸಂಜೆ ಪ್ರಾರ್ಥನೆ ನಡೆಸಿದ ಬಳಿಕ ತೆಂಗಿನ ಗರಿಗಳಿಂದ ತಯಾರಿಸಿದ ಸೂಟೆಯ ಬೆಳಕಿನಲ್ಲಿ ಪಲ್ಲಕ್ಕಿಯೊಂದಿಗೆ ಶ್ರೀ ದೈವಗಳ ಭಂಡಾರ ಪುತ್ತೂರಿಗೆ ಹೊರಟಿತು.

LEAVE A REPLY