ಚಕ್ರವರ್ತಿ ಡಾನ್ ಅಲ್ಲ ದೇಶಪ್ರೇಮಿ

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಬಹಳ ದಿನಗಳಿಂದ ಅಂಡರ್‍ವಲ್ಡರ್ ಸಬ್ಜೆಕ್ಟ್ ಹೊಂದಿದ ಸಿನಿಮಾ ನಿರ್ಮಾಣವಾಗಿದ್ದಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಥದ್ದೊಂದು ಸಿನಿಮಾ ಮೂಲಕ ಅಭಿಮಾನಿಗಳಿಗೆ ಮತ್ತೆ ತೆರೆಮೇಲೆ ದರ್ಶನ ಕೊಟ್ಟಿದ್ದಾರೆ. ಒಬ್ಬ ಅಪ್ಪಟ ದೇಶಪ್ರೇಮಿಯಾಗಿ ಕಾಣಿಸಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

ತಾನು ಪ್ರೀತಿಸಿದ ಹುಡುಗಿ ಶಾಂತಿ (ದೀಪಾ ಸನ್ನಿದಿ)ಯ ಜೊತೆ ಸಿಟಿಗೆ ಬರುವ ನಾಯಕ ಶಂಕರ (ದರ್ಶನ್) ಸ್ನೇಹಿತ (ಸೃಜನ್ ಲೋಕೇಶ್) ನಡೆಸುತ್ತಿದ್ದ ಬಾರ್‍ನ ಉಸ್ತುವಾರಿ ವಹಿಸಿಕೊಳ್ಳುತ್ತಾನೆ. ಅಲ್ಲಿಗೆ ಬರುವ ಡಾನ್ ಮಹಾರಾಜನ ಸಹಾಯಕರನ್ನು ಎದುರಿಸುವ ಮೂಲಕ ಪೊಲೀಸರ ಕಣ್ಣಿಗೆ ಬೀಳುತ್ತಾನೆ. ಈತನ ಸಹಾಯದಿಂದ ಡಾನ್ ಮಹಾರಾಜನನ್ನು ಮಟ್ಟಹಾಕಲು ಸ್ಕೆಚ್ ಹಾಕುವ ಪೊಲೀಸರು ಆತನಿಂದ ಕೊಲೆ ಮಾಡಿಸುತ್ತಾರೆ. ನಂತರ ಆತನನ್ನು ಮಲೇಶಿಯಾದಲ್ಲಿರುವ ದೇಶದ್ರೋಹಿಗಳನ್ನು ಸದೆಬಡಿಯುವ ಕೆಲಸಕ್ಕೂ ಕಳಿಸುತ್ತಾರೆ. ಶಂಕರ ಅಲ್ಲಿಗೆ ಹೋಗುವಾಗ ಅಂಡರ್‍ವಲ್ರ್ಡ್ ಡಾನ್ ಚಕ್ರವರ್ತಿಯಾಗಿ ಹೋಗುತ್ತಾನೆ. ಈ ರಹಸ್ಯ ಪೊಲೀಸರಿಗೆ ಬಿಟ್ಟರೆ ಶಂಕರನ ಮನೆಯವರಿಗೂ ಗೊತ್ತಿರುವುದಿಲ್ಲ. ಮಲೇಶಿಯಾದಲ್ಲಿ ಚಕ್ರವರ್ತಿ ತನ್ನ ಚಾಣಕ್ಯ ತಂತ್ರದಿಂದ ಹೇಗೆ ಭಯೋತ್ಪಾದಕರನ್ನು ಬಗ್ಗುಬಡಿದ ಎನ್ನುವುದೇ ಚಿತ್ರದ ಎಳೆ.

27 ವರ್ಷಗಳ ಹಿಂದೆ ರಾಜೇಂದ್ರಬಾಬು ಅವರ ನಿರ್ದೇಶನದಲ್ಲಿ ತೆರೆಕಂಡ ಚಕ್ರವರ್ತಿ ಚಿತ್ರದಲ್ಲಿ ರೆಬಲ್‍ಸ್ಟಾರ್ ಅಂಬರೀಶ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಅದೂ ಸಹ ಭೂಗತಲೋಕದ ಕತೆಯ ಎಳೆಯನ್ನು ಹೊಂದಿತ್ತು. ಮುಂಬೈ ಭೂಗತಲೋಕಕ್ಕೆ ಮಾತ್ರ ಸಿಮೀತವಾಗಿದ್ದ ಅಂದಿನ ಚಕ್ರವರ್ತಿ, ಈಗ ದೂರದ ಮಲೇಶಿಯಾಗೂ ಹೋಗಿ ಬಂದಿದ್ದಾನೆ.     .

LEAVE A REPLY