ಗ್ರೂಪ್ ಎ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗದಿಂದ ನೇಮಕಾತಿ

ಕರ್ನಾಟಕ ಲೋಕಸೇವಾ ಆಯೋಗವು ಯುಪಿಎಸ್‌ಸಿ/ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ವಿಭಾಗ :
ಕೇಂದ್ರ ಕೃಷಿ ಇಲಾಖೆಯಲ್ಲಿ ೨ ಅಸಿಸ್ಟೆಂಟ್ ಕಮೀಷನರ್ ಹುದ್ದೆಗಳು. ವಿದ್ಯಾರ್ಹತೆ: ಬೆಳೆ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಹುದ್ದೆಗೆ ಸಂಬಂಧಪಟ್ಟಂತೆ ೩ ವರ್ಷದ ಅನುಭವ. ವೇತನ: ರೂ. ೧೫,೫೦೦ರಿಂದ ೩೯,೧೦೦ (ಪಿಬಿ ೩)ಜೊತೆಗೆ ೬,೫೦೦. ವಯೋಮಿತಿ: ೪೦ ವರ್ಷಗಳು.
ಗಾಜಿಯಾಬಾದ್‌ನ ಹೋಮಿಯೋಪತಿ ಫಾರ್ಮಕೋಲಿಯಾ ಲ್ಯಾಬೋರೇಟರಿಯಲ್ಲಿ ೦೧ ಸೈಂಟಿಫಿಕ್ ಆಫೀಸರ್ ಹುದ್ದೆ.
ವಿದ್ಯಾರ್ಹತೆ : ಮೈಕ್ರೋಬಯಲಾಜಿ ವಿಷಯದಲ್ಲಿ ಎಂಎಸ್‌ಸಿ ಪದವಿ ಜೊತೆಗೆ ಹುದ್ದೆಗೆ ಸಂಬಂಧಪಟ್ಟಂತೆ ೧ ವರ್ಷದ ಅನುಭವ. ವೇತನ: ರೂ. ೧೫,೫೦೦ರಿಂದ ೩೯,೧೦೦ (ಪಿಬಿ ೩)ಜೊತೆಗೆ ೫೪೦೦. ವಯೋಮಿತಿ: ೩೫ ವರ್ಷಗಳು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ೬ ಸ್ಟೋರ್ ಕೀಪರ್ ಹುದ್ದೆಗಳು. ವಿದ್ಯಾರ್ಹತೆ : ಪದವಿ ಹಾಗೂ ೩ ವರ್ಷದ ಅನುಭವ. ವೇತನ:೯,೩೦೦-೩೪೮೦೦(ಪಿಬಿ೨) ಜೊತೆಗೆ ಗ್ರೇಡ್ ಪೇ ರೂ. ೪,೬೦೦. ವಯೋಮಿತಿ: ೩೦ ವರ್ಷಗಳು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ: ೮ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು. ವಿದ್ಯಾರ್ಹತೆ: ಎಂ.ಬಿ.ಬಿ.ಎಸ್. ಪದವಿ ಹಾಗೂ ೩ ವರ್ಷದ ಅನುಭವ. ವೇತನ : ರೂ.೧೫,೬೦೦-೩೯,೧೦೦ ಜೊತೆಗೆ ಗ್ರೇಡ್ ಪೇ ರೂ.೫೬೦೦. ವಯೋಮಿತಿ: ರೂ. ೪೦ ವರ್ಷಗಳು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ: ೨ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು. ವಿದ್ಯಾರ್ಹತೆ: ಎಂಬಿಬಿಎಸ್ ಪದವಿಯೊಂದಿಗೆ ೩ ವರ್ಷದ ಅನುಭವ. ವೇತನ : ೧೫,೬೦೦ರಿಂದ ೩೯೧೦೦ ಜೊತೆಗೆ ಗ್ರೇಡ್ ಪೇ ರೂ. ೬೬೦೦. ವಯೋಮಿತಿ: ೪೦ ವರ್ಷಗಳು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ: ೧೦ ಸಹಾಯಕ ಪ್ರಾಧ್ಯಾಪಕ ಹುದ್ದೆಗಳು. ವಿದ್ಯಾರ್ಹತೆ: ಎಂಬಿಬಿಎಸ್ ಪದವಿಯೊಂದಿಗೆ ೩ ವರ್ಷದ ಅನುಭವ. ವೇತನ: ೧೫೬೦೦ರಿಂದ ೩೯,೧೦೦ ಹಾಗೂ ಗ್ರೇಡ್ ಪೇ ರೂ.೫೬೦೦. ವಯೋಮಿತಿ: ೪೦ ವರ್ಷಗಳು.
ಪಬ್ಲಿಕ್ ಎಂಟರ್‌ಪ್ರೈಸಸ್‌ನಲ್ಲಿ : ಸಹಾಯಕ ನಿರ್ದೇಶಕ ೨ ಹುದ್ದೆಗಳು. ವಿದ್ಯಾರ್ಹತೆ: ಕಾಮರ್ಸ್, ಸ್ಟಾಟಿಸ್ಟಿಕ್ಸ್, ಎಕನಾಮಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ೩ ವರ್ಷದ ಅನುಭವ. ವೇತನ : ರೂ. ೧೫೬೦೦ರಿಂದ ೩೯೧೦೦ ಜೊತೆಗೆ ಗ್ರೇಡ್ ಪೇ ರೂ.೫೪೦೦. ವಯೋಮಿತಿ: ೩೫ ವರ್ಷಗಳು.
ಕಾರ್ಮಿಕ ಆಯುಕ್ತರ ಮುಖ್ಯ ಕಚೇರಿಯಲ್ಲಿ: ೩೩ ಅಧಿಕಾರಿ ಹುದ್ದೆಗಳು. ವಿದ್ಯಾರ್ಹತೆ: ಕಾಮರ್ಸ್/ಎಕನಾಮಿಕ್ಸ್/ಸೋಷಿಯಲ್ ವರ್ಕ್ಸ್/ಸೋಷಿಯಾಲಜಿ ವಿಷಯದಲ್ಲಿ ಪದವಿ ಹಾಗೂ ಲಾ, ಲೇಬರ್ ರಿಲೇಷನ್ಸ್, ಲೇಬರ್ ವೆಲ್‌ಫೇರ್, ಲೇಬರ್ ಲಾ, ಸೋಷಿಯಲಾಜಿ, ಕಾಮರ್ಸ್, ಸೋಷಿಯಲ್ ವರ್ಕ್/ವೆಲ್‌ಫೇರ್, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್, ಪರ್ಸನಲ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಹಾಗೂ ಹುದ್ದೆಗೆ ಸಂಬಂಧಪಟ್ಟಂತೆ ಅನುಭವವನ್ನು ಹೊಂದಿರಬೇಕು. ವೇತನ : ರೂ. ೯,೩೦೦ರಿಂದ ೩೪,೮೦೦ (ಪಿಬಿ೨) ಮತ್ತು ೪೬೦೦ ಗ್ರೇಡ್‌ಪೇ, ವಯೋಮಿತಿ: ೩೦ ವರ್ಷಗಳು.
ಶಾಸನ ಸಭೆಯ ಸಮಾಲೋಚನ ಸಹಾಯಕ (ತೆಲುಗು) ೧ ಹುದ್ದೆ.
ವಿದ್ಯಾರ್ಹತೆ: ಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಹುದ್ದೆಗೆ ಸಂಬಂಧಪಟ್ಟಂತೆ ಅನುಭವ. ವೇತನ: ರೂ. ೧೫೬೦೦ರಿಂದ ೩೮೧೦೦ ಪ್ಲಸ್ ಗ್ರೇಡ್‌ಪೇ ರೂ. ೫೬೦೦. ವಯೋಮಿತಿ: ೪೦ ವರ್ಷಗಳು.
ಮೇಲ್ಕಂಡ ಎಲ್ಲಾ ಹುದ್ದೆಗಳಿಗೆ ಯುಪಿಎಸ್‌ಸಿ ವೆಬ್‌ಸೈಟ್‌ನ ಮುಖಾಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು.
ನೇಮಕಾತಿ ವಿಧಾನ : ಎಲ್ಲಾ ಹುದ್ದೆಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ವರ್ಗಗಳಿಗೆ ಅನುಗುಣವಾಗಿ ಸಾಮಾನ್ಯ ೫೦, ಒಬಿಸಿ ೪೫, ಎಸ್‌ಸಿ, ಎಸ್‌ಟಿ, ಪಿಎಚ್ ೪೦ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದುಕೊಳ್ಳಬೇಕು. ಸಂದರ್ಶನಕ್ಕೆ ಒಟ್ಟು ೧೦ ಅಂಕಗಳೆಂದು ನಿಗದಿಸಲಾಗಿದೆ.
ಅರ್ಜಿ ಶುಲ್ಕ: ರೂ. ೨೫ನ್ನು ಎಸ್‌ಬಿಐ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ನಗದು ಅಥವಾ ಆನ್‌ಲೈನ್ ಮೂಲಕ ಪಾವತಿಸಬಹುದಾಗಿದೆ. ಎಸ್‌ಸಿ, ಎಸ್‌ಟಿ, ವಿಕಲಾಂಗಚೇತನ, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ಇರುವುದಿಲ್ಲ.
ಅರ್ಜಿ ಸಲ್ಲಿಸಲು ಕೊನೇ ದಿನಾಂಕ: ೧೩.೦೪.೨೦೧೭. ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ನ್ನು ನೋಡುವುದು.

LEAVE A REPLY