ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕ್: ಪ್ರಥಮ ದರ್ಜೆ, ಕಿರಿಯ ಸಹಾಯಕರ ಹುದ್ದೆಗಳಿಗೆ ನೇಮಕಾತಿ

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಚಿಕ್ಕಮಗಳೂರು ಇದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ನೇಮಕಾತಿ ಮಾಡಲು ಉದ್ದೇಶಿಸಿರುವ ಪ್ರಥಮ ದರ್ಜೆ ಸಹಾಯಕರು (೨೮), ಕಿರಿಯ ಸಹಾಯಕರು (೫೦) ಹುದ್ದೆಗಳು.
ಪ್ರಥಮ ದರ್ಜೆ ಸಹಾಯಕರು : ಒಟ್ಟು ೨೮ ಹುದ್ದೆಗಳು.
ವೇತನ : ರೂ. ೧೪೫೫೦ರಿಂದ ೨೬೭೦೦ ಮತ್ತು ನಿಯಮಾನುಸಾರ ಲಭ್ಯವಾಗುವ ಇತರೇ ಭತ್ಯೆಗಳು.
ಕಿರಿಯ ಸಹಾಯಕರು: ಒಟ್ಟು ೫೦ ಹುದ್ದೆಗಳು. ವೇತನ : ರೂ. ೧೧೬೦೦ರಿಂದ ೨೧೦೦೦ ಮತ್ತು ನಿಯಮಾನುಸಾರ ಲಭ್ಯವಾಗುವ ಇತರೇ ಭತ್ಯೆಗಳು.
ಶೈಕ್ಷಣಿಕ ವಿದ್ಯಾರ್ಹತೆ : ಪ್ರಥಮ ದರ್ಜೆ ಸಹಾಯಕರು ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಅಂಗೀಕೃತ ವಿವಿಯಿಂದ ಬಿಎ/ಬಿಎ(ಸಹಕಾರ)/ಬಿಕಾಂ/ಬಿಬಿಎಂ/ಬಿಸಿಎ/ಬಿಎಸ್‌ಸಿ/ಬಿಎಸ್‌ಸಿ (ಕಂಪ್ಯೂಟರ್ ಸೈನ್ಸ್) ಪದವಿ ಅಥವಾ ಬಿ.ಎ. ಕಂಪ್ಯೂಟರ್ ಸೈನ್ಸ್/ಇನ್‌ಫಾರ್ಮೇಶನ್ ಸೈನ್ಸ್ ಪದವಿಯಲ್ಲಿ ಕನಿಷ್ಠ ಸರಾಸರಿ ೫೫% ಅಂಕ ಗಳಿಸಿರಬೇಕು.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-೧ ಅಭ್ಯರ್ಥಿಗಳು ಕನಿಷ್ಠ ಸರಾಸರಿ ಶೇ. ೫೦ ಅಂಕ ಗಳಿಸಿರಬೇಕು. ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸಲು ಸಾಮಾನ್ಯ ಜ್ಞಾನ ಹೊಂದಿರಬೇಕು. ೩ ವರ್ಷಗಳಿಗಿಂತ ಕಡಿಮೆ ಅವಧಿಯ ಯಾವುದೇ ಕೋರ್ಸ್ ಅಥವಾ ಪದವಿಗಳನ್ನು ವಿದ್ಯಾರ್ಹತೆಗೆ ಪರಿಗಣಿಸಲಾಗುವುದಿಲ್ಲ.
ಕಿರಿಯ ಸಹಾಯಕರು : ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಅಂಗೀಕೃತ ವಿವಿಯಿಂದ ಬಿಎ/ಬಿಎ(ಸಹಕಾರ)/ಬಿಕಾಂ/ಬಿಬಿಎಂ/ಬಿಸಿಎ/ಬಿಎಸ್‌ಸಿ(ಕಂಪ್ಯೂಟರ್ ಸೈನ್ಸ್) ಪದವಿ ಅಥವಾ ಬಿ.ಇ. ಕಂಪ್ಯೂಟರ್ ಸೈನ್ಸ್/ಇನ್‌ಫಾರ್ಮೇಶನ್ ಸೈನ್ಸ್ ಪದವಿಯಲ್ಲಿ ಕನಿಷ್ಠ ಸರಾಸರಿ ಶೇ.೫೦ ಅಂಕ ಗಳಿಸಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-೧ ಅಭ್ಯರ್ಥಿಗಳು ಕನಿಷ್ಠ ಸರಾಸರಿ ೪೫% ಅಂಕ ಗಳಿಸಿರಬೇಕು. ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸಲು ಸಾಮಾನ್ಯ ಜ್ಞಾನ ಹೊಂದಿರಬೇಕು. ೩ ವರ್ಷಗಳಿಗಿಂತ ಕಡಿಮೆ ಅವಧಿಯ ಯಾವುದೇ ಕೋರ್ಸ್ ಅಥವಾ ಪದವಿಗಳನ್ನು ವಿದ್ಯಾರ್ಹತೆಗೆ ಪರಿಗಣಿಸಲಾಗುವುದಿಲ್ಲ.
ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
ಸಾಮಾನ್ಯ ವರ್ಗಕ್ಕೆ ಕನಿಷ್ಠ ೧೮, ಗರಿಷ್ಠ ೩೫, ೨ಎ, ೨ಬಿ, ೩ಎ, ೩ಬಿಗೆ ಗರಿಷ್ಠ ೩೮, ಪ.ಜಾ./ಪ.ಪಂ./ಪ್ರ-೧ಕ್ಕೆ ೪೦ ವರ್ಷಗಳು.
ಆಯ್ಕೆ ವಿಧಾನ: ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳ ಪರಿಶೀಲನೆಯ ನಂತರ ಪದವಿ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ ೧ಃ೨೦ ಅನುಪಾತದಲ್ಲಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಪದವಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ೫೦%ರಷ್ಟು ಹಾಗೂ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ೫೦%ರಷ್ಟು ಸೇರಿಸಿ ಗಳಿಸಿದ ಅಂಕಗಳನ್ನು ಶೇ. ೮೫ಕ್ಕೆ ಮಾರ್ಪಡಿಸಿ ಲಭಿಸಿದ ಅಂಕಗಳ ಆಧಾರದ ಮೇಲೆ ಶೇ. ೧ಃ೫ರ ಪ್ರಮಾಣದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಮೌಖಿಕ ಸಂದರ್ಶನಕ್ಕೆ ಕರೆ ಕಳುಹಿಸಲಾಗುವುದು. ಮೌಖಿಕ ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಸೇರಿಸಿ ಕರ್ನಾಟಕ ಸರಕಾರದ ಮೀಸಲಾತಿ ನಿಯಮವನ್ನು ಅನುಸರಿಸಿ ಆಯ್ಕೆ ಮಾಡಲಾಗುವುದು.
ಲಿಖಿತ ಪರೀಕ್ಷೆ: ಪದವಿ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಶೇ. ಪ್ರಮಾಣದ ಅರ್ಹತೆ ಆಧಾರದ ಮೇಲೆ ೧ಃ೨೦ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಯುವ ಸ್ಥಳ, ದಿನಾಂಕ ಮತ್ತು ವೇಳೆ ಇವುಗಳ ವಿವರವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯ (ಇತರೇ), ಪ್ರವರ್ಗ-೨ಎ, ೨ಬಿ, ೩ಎ, ೩ಬಿಗೆ ಸೇರಿದ ಅಭ್ಯರ್ಥಿಗಳಿಗೆ ರೂ. ೧೦೦೦. ಪ.ಜಾ., ಪ.ಪಂ., ಪ್ರವರ್ಗ-೧ರ ಮತ್ತು ವಿಕಲಾಂಗ ಚೇತನ ಹಾಗೂ ಸೈನಿಕ ಅಭ್ಯರ್ಥಿಗಳಿಗೆ ರೂ. ೫೦೦.
ಅರ್ಜಿ ಶುಲ್ಕವನ್ನು ಮೇ ೨ರೊಳಗೆ ಪಾವತಿಸುವುದು. ಅರ್ಜಿ ಶುಲ್ಕವನ್ನು ಇ-ಪಾವತಿ ಅಂಚೆ ಕಚೇರಿಯ ಮೂಲಕ ಸಂದಾಯ ಮಾಡಬೇಕು. (ಅರ್ಜಿ ಶುಲ್ಕ ಮತ್ತು ಸೇವಾ ತೆರಿಗೆ ರೂ. ೩೦)
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದ ನಂತರ ಸಲ್ಲಿಸುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿಗಳನ್ನು ಆನ್‌ಲೈನ್ ಮುಖಾಂತರವೇ ಸಲ್ಲಿಸುವುದು.
ಅರ್ಜಿಯನ್ನು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೇ ದಿನಾಂ: ೨೮.೦೪.೨೦೧೭. ಶುಲ್ಕ ಪಾವತಿಸಲು ಕೊನೇ ದಿನಾಂಕ: ಮೇ ೨, ೨೦೧೭. ಹೆಚ್ಚಿನ ವಿವರಗಳಿಗೆ ಬ್ಯಾಂಕಿನ ವೆಬ್‌ಸೈಟ್ನ್ನು ನೋಡುವುದು.

LEAVE A REPLY