ಬರದಿಂದ ಜನ ಗುಳೇ ಹೊರಟರೂ ಸರಕಾರ ನಿರ್ಲಕ್ಷ್ಯ

ಕೊಪ್ಪಳ:ರಾಜ್ಯದ ಬಹುತೇಕ‌ ಜಿಲ್ಲೆಗಳಲ್ಲಿ ಬರದಿಂದ ಕೃಷಿಕರು ಹಾಗೂ ಜನತೆ ತತ್ತರಿಸಿಹೋಗಿದ್ದಾರೆ. ಈ ಕಾರಣದಿಂದ ಜನ ಗುಳೇ ಹೊರಟರೂ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಕುಮಾರಸ್ವಾಮಿಗೆ ರಾಜ್ಯದ ಜನರ ಮೇಲೆ ನಂಬಿಕೆ ಇಲ್ಲ. ಅಭಿವೃದ್ಧಿ ಕಡೆಗೆ ಗಮನ‌ ಹರಿಸದೇ ದೇವಸ್ಥಾನಗಳಿಗೆ ಮಾತ್ರವೇ ಭೇಟಿ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್‌ನಿಂದ ಧರ್ಮ ಒಡೆಯುವ ಕೆಲಸವಾದರೆ ಜೆಡಿಎಸ್‌ನಿಂದ ಧರ್ಮ ವಿಭಜನೆಗೆ ಬೆಂಬಲ ನೀಡಲಾಗುತ್ತಿದೆ. ಹಿಂದೂ ಸಮಾಜದ ವಿವಿಧ ಆಚರಣೆಗಳಿಗೆ ಕಾನೂನಿನಲ್ಲಿ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದ್ದು ಗಣೇಶ ವಿಸರ್ಜನೆ ವೇಳೆ ಕೊಪ್ಪಳದ ಯುವಕರ ಮೇಲೆ ಹಾಕಲಾಗಿರುವ ಕೇಸ್ ಕ್ರಮ ಖಂಡನೀಯ ಎಂದರು.

 

LEAVE A REPLY