ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿಗ್ವಿಜಯ ರಥಕ್ಕೆ ಅದ್ಧೂರಿ ಸ್ವಾಗತ

ಚಿತ್ರ:ಎಸ್‍ಯುಬಿ:ಸೆಪ್ಟಂಬರ್:22:04: .ಶೋಭಾಯಾತ್ರೆಯನ್ನು ಪ್ರಮುಖರಾದ ವಿಶ್ವ

ಸುಬ್ರಹ್ಮಣ್ಯ:ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆಯ ಅಂಗವಾಗಿ ಹೊರಟ ದಿಗ್ವಿಜಯ ರಥಯಾತ್ರೆಯು ಶನಿವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿತು.ರಥಯಾತ್ರೆಯನ್ನು ಕುಕ್ಕೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಬಳಿಕ ಕುಕ್ಕೆಸುಬ್ರಹ್ಮಣ್ಯದ ಕಾಶಿಕಟ್ಟೆಯಿಂದ ರಥದ ವೈಭವದ ಶೋಭಾಯಾತ್ರೆ ನಡೆಯಿತು.ಶೋಭಾಯಾತ್ರೆಯನ್ನು ಪ್ರಮುಖರಾದ ವಿಶ್ವ ಹಿಂದೂ ಪರಿಷತ್‍ನ ಸುಬ್ರಹಣ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಕುಮಾರ್ ನಾಯರ್ ಬಿಲದ್ವಾರ ಮತ್ತು ಎಬಿವಿಪಿ ನಗರ ಕಾರ್ಯದರ್ಶಿ ರಕ್ಷಿತ್ ಉದ್ಘಾಟಿಸಿದರು.
ಬಳಿಕ ಯುವ ಬ್ರಿಗೇಡ್‍ನ ಪಂಚಾಕ್ಷರಿ ಹಿರೇಮಠ್ ಸ್ವಾಗತಿಸಿ ಪ್ರಸ್ತಾಪಿಸಿದರು.ಸಂತೋಷ್ ಸಾಮ್ರಾಟ್ ದಿಕ್ಸೂಚಿ ಭಾಷಣ ಮಾಡಿದರು.ಬಳಿಕ ವೈಭವದ ಶೋಭಾಯಾತ್ರೆ ನೆರವೇರಿತು.

LEAVE A REPLY