ಹವಾಮಾನ ವೈಪರೀತ್ಯ: ಧರ್ಮಸ್ಥಳದಲ್ಲಿ ಇಳಿಯದೆ ವಾಪಸ್ಸಾದ ಜಮೀರ್ ಹೆಲಿಕಾಪ್ಟರ್

ಮಂಗಳೂರು: ನಗರದ ಜಕ್ಕೂರು ಏರೋ ಡ್ರಮ್‌ನಿಂದ ಉಜಿರೆ ಕಡೆಗೆ ತೆರಳುತ್ತಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಧರ್ಮಸ್ಥಳದಲ್ಲಿ ಲ್ಯಾಂಡ್ ಆಗದೆ ವಾಪಸ್ಸಾದ ಘಟನೆ ಸೋಮವಾರ ನಡೆದಿದೆ.
ಧರ್ಮಸ್ಥಳದ ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಜಕ್ಕೂರಿನಿಂದ ತೆರಳುತ್ತಿದ್ದ ಸಚಿವರಿದ್ದ ಈ ಹೆಲಿಕಾಪ್ಟರ್, ಮಾರ್ಗ ಮಧ್ಯೆ ಹವಾಮಾನ ವೈಪರೀತ್ಯದ ಕಾರಣ ಸಿಗ್ನಲ್ ಕಳೆದುಕೊಂಡಿತು. ಮುಂಜಾಗ್ರತೆ ಕ್ರಮವಾಗಿ ಹೆಲಿಕಾಪ್ಟರ್ ಅನ್ನು ಪೈಲೆಟ್ ಬೆಂಗಳೂರಿನತ್ತ ತಿರುಗಿಸಿದ್ದು, ಬೆಂಗಳೂರಿಗೆ ಪ್ರಯಾಣಬೆಳೆಸಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY