ಚಾರ್ಮಾಡಿ ಘಾಟಿ ವಾಹನ ಸಂಚಾರಕ್ಕೆ ಸಿದ್ಧ

ಬೆಳ್ತಂಗಡಿ: ಕಳೆದ ನಾಲ್ಕು ದಿನಗಳಿಂದ ಸಂಚಾರ ರಹಿತವಾಗಿದ್ದ ಚಾರ್ಮಾಡಿ ಘಾಟಿ ರಸ್ತೆ ಇದೀಗ ವಾಹನಗಳ ಸಂಚಾರಕ್ಕೆ ಸಿದ್ಧವಾಗುತ್ತಿದೆ.

ಜೂ. 11 ಮತ್ತು 12 ರಂದು ಚಾರ್ಮಾಡಿ ರಸ್ತೆಯ ಎರಡನೇ ತಿರುವಿನಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಇಕ್ಕೆಲಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಸುಮಾರು 15 ಗಂಟೆಗಳ ಪ್ರಯಾಣಿಕರು ಪರದಾಡುವಂತಾಯಿತು. ಇತ್ತ ಮಳೆಯ ಪ್ರಮಾಣ ಹೆಚ್ಚಾದಂತೆ  ಉಳಿದ ತಿರುವುಗಳಲ್ಲೂ ಧರೆ ಕುಸಿಯಲು ಪ್ರಾರಂಭವಾಗತೊಡಗಿತು.

ಹೀಗಾಗಿ ಜಿಲ್ಲಾಡಳಿತ ಜೂ. 13 ಮತ್ತು 14 ರಂದುರಸ್ತೆ ಮೇಲೆ ಬಿದ್ದ ಮಣ್ಣು, ಮರಗಳ ತೆರವಿಗೋಸ್ಕರ ಸಂಚಾರ ನಿಷೇಧ ಮಾಡಿತ್ತು. ಬುಧವಾರ ಮತ್ತು ಗುರುವಾರ ಸುಮಾರು 13 ಕ್ಕೂ ಹೆಚ್ಚು ಜೆಸಿಬಿ, ಟಿಪ್ಪರ್ ಯಂತ್ರಗಳು ಯುದ್ದೋಪಾದಿಯಲ್ಲಿ ಕಾರ್ಯ ನಿರ್ವಹಿಸಿದವು. ರಸ್ತೆಗೆ ಬಿದ್ದಿದ್ದ ಜರಿದು ಹೋದ ಮಣ್ಣನ್ನು ಬದಿಗೆ ಸರಿಸಲಾಯಿತು. ಅರಣ್ಯ ಇಲಾಖೆಯವರುಅಪಾಯಕಾರಿ ಮರಗಳನ್ನು ತೆರವು ಗೊಳಿಸಿದರು. ಘನ ಅರಣ್ಯದ ಮಧ್ಯೆ, ಅಪಾಯಕಾರಿ ತಿರುವುಗಳ ಮಧ್ಯೆಎರಡು ದಿನಗಳ ಅವಿರತ ಶ್ರಮದಿಂದಾಗಿರಸ್ತೆಮೊದಲಿನಂತೆ ಮಾಡಲಾಗಿದೆ.

ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ವಾಹನಗಳು ಸಂಚರಿಸಬಹುದೆಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ಲಘು ವಾಹನಗಳು ಮಾತ್ರವೇ ಸದ್ಯ ಓಡಾಟಕ್ಕೆ ಅನುಮತಿ ನೀಡಲಾಗಿದ್ದು ಘನ ವಾಹನಗಳು ಬೇರೆ ಮಾರ್ಗವನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.

LEAVE A REPLY