ಎಡಕುಮೇರಿ ಬಳಿ ಮತ್ತೆ ಭೂಕುಸಿತ : ರೈಲು ಸಂಚಾರ ಸ್ಥಗಿತ

ಹಾಸನ/ಸಕಲೇಶಪುರ: ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಳೆಯ ಕಾರಣದಿಂದ ಸಕಲೇಶಪುರ ತಾಲೂಕು  ಎಡಕುಮೇರಿ ಕಡಗರಹಳ್ಳಿ ನಡುವೆ ಮತ್ತೆ ಭೂಕುಸಿತ ಉಂಟಾಗಿದ್ದು ಮಂಗಳೂರು ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.

ಬೆಂಗಳೂರಿನಿಂದ-ಮಂಗಳೂರಿಗೆ ಹೊರಟಿದ್ದ ರೈಲು ಕಡಗರವಳ್ಳಿ ಬಳಿ ನಿಲುಗಡೆಯಾಗಿ ಬಳಿಕ ಮತ್ತೆ ಹಾಸನಕ್ಕೆ ರೈಲು ವಾಪಸ್ ಆಗಿದ್ದು ಪ್ರಯಾಣಿಕರಿಗೆ ಹಣ ಮರು ಪಾವತಿಸಿ ಬದಲಿ ವ್ಯವಸ್ಥೆ ಕಲ್ಪಿಸಲು ಮಾಡಲಾಗಿತ್ತು.ಮತ್ತೊಂದೆಡೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಸುಬ್ರಹ್ಮಣ್ಯ ಬಳಿ ಸ್ಥಗಿತವಾಗಿ ಮತ್ತೆ ಮಂಗಳೂರಿಗೆ ಹಿಂತಿರುಗಿದೆ.
ಇದೀಗ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.

 

LEAVE A REPLY