ಚಾರ್ಮಾಡಿ ಘಾಟಿ ಎರಡು ದಿನ ಬಂದ್

ಮಂಗಳೂರು/ಚಾರ್ಮಾಡಿ : ಭಾರೀ ಮಳೆಯ ಕಾರಣದಿಂದ ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಉಂಟಾಗಿದ್ದು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದ್ದು ಮುಂಜಾಗ್ರತಾ  ಕ್ರಮವಾಗಿ ಎರಡು ದಿನಗಳ ಕಾಲ ವಾಹನ ಸಂಚಾರ ನಿಷೇಧ ಮಾಡಲಾಗಿದೆ ಎಂದು ದಕ ಜಿಲ್ಲಾ ಪೊಲೀಸ್ ಅಧೀಕ್ಷಕ ರವಿಕಾಂತೇ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾರ್ಮಾಡಿ ಹಾಗೂ ಕೊಟ್ಟಿಗೆಹಾರದಲ್ಲಿ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ ಮಾಡಿ ವಾಹನ ಸಂಚಾರವನ್ನು ಎರಡು ದಿನಗಳ ಕಾಲ ಸಂಪೂರ್ಣ ನಿಷೇಧ ಮಾಡಲಾಗುತ್ತಿದೆ. ಅಲ್ಲದೆ ರಸ್ತೆ ದುರಸ್ತಿ ಕಾರ್ಯ, ಮಣ್ಣು ತೆರವು ಕಾರ್ಯ ಎರಡು ದಿನದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬದಲಿ ಮಾರ್ಗ:

ದಕ್ಷಿಣ ಕನ್ನಡ ಜಿಲ್ಲೆಯಿಂದ ತೆರಳುವ ವಾಹನಗಳು, ಪ್ರಯಾಣಿಕರು ಬದಲಿ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ಚಾರ್ಮಾಡಿ ಮಾರ್ಗವಾಗಿ ತೆರಳುವ ವಾಹನಗಳು ನಾರಾವಿ -ಬಜಗೋಳಿ- ಕಳಸ- ಮೂಡಿಗೆರೆ – ಬೇಲೂರು ಮಾರ್ಗವಾಗಿ  ಅಥವಾ ಬಿಸಿ ರೋಡ್- ಸುಳ್ಯ, ಮಡಿಕೇರಿ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸುವ ವಾಹನಗಳು ಕೊಟ್ಟಿಗೆಹಾರದಿಂದ ಸಂಸೆ, ಕಳಸ, ಬಜಗೋಳಿ ಮಾರ್ಗವಾಗಿ ಆಗಮಿಸಲು ಸೂಚಿಸಲಾಗಿದೆ.

 

LEAVE A REPLY