ಕರಾವಳಿ ಜಿಲ್ಲೆಯಲ್ಲಿ ಮಳೆಯ ಅಬ್ಬರ : ಶಾಲೆಗಳಿಗೆ ರಜೆ ಘೋಷಣೆ

ಮಂಗಳೂರು: ಮುಂಗಾರು ಮಳೆ ಪ್ರಬಲಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಶುಕ್ರವಾರ ಹಾಗೂ ಶನಿವಾರ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಎರಡು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

ಮಂಗಳೂರು, ಉಡುಪಿ, ಕಾರವಾರ ಸೇರಿದಂತೆ ಕರಾವಳಿ ತೀರದಲ್ಲಿ ಭಾರೀ ಮಳೆಯಾಗಲಿದೆ.ಬೆಳಗ್ಗಿನಿಂದಲೇ ದಟ್ಟ ಮೋಡ ಕವಿದ ವಾತಾವರಣ ಇದ್ದು ನಿರಂತರ ಹನಿ ಮಳೆಯಾಗುತ್ತಿದೆ.

ಮುಂದಿನ 48 ಗಂಟೆಗಳಲ್ಲಿ ಗೋವಾ ಸೇರಿದಂತೆ ಮುಂಬಯಿಯರೆಗೂ ಕರಾವಳಿ ತೀರದಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ. ಎರಡು ವಾರಗಳ ಹಿಂದೆ ಮಂಗಳೂರು ಪ್ರದೇಶದಲ್ಲಿ ಸುರಿ ಭಾರೀ ಮಳೆಗೆ ಜನಜೀವನ ತತ್ತರಗೊಂಡಿತ್ತು. ಇದೀಗ ಮತ್ತೆ ಮಳೆಯ ಅಬ್ಬರ ಮಂಗಳೂರು ಪ್ರದೇಶದಲ್ಲೂ ಕಾಣಲಿದೆ. ಹೀಗಾಗಿ ಎಲ್ಲಾ ಇಲಾಖೆಗಳು ಯಾವುದೇ ಸನ್ನಿವೇಶ ಎದುರಿಸಲು ಸನ್ನದ್ಧವಾಗಿರಲು ಮೌಖಿಕ ಸೂಚನೆ ನೀಡಲಾಗಿದೆ.

LEAVE A REPLY