ವಿರೋಧ, ಅಸಮಾಧಾನಗಳ ನಡುವೆಯೇ 25 ’ದೋಸ್ತಿ’ ಸಚಿವರ ಪ್ರಮಾಣ

ಬೆಂಗಳೂರು: ಬಹಳಷ್ಟು ವಿರೋಧ, ಅಸಮಾಧಾನಗಳ ನಡುವೆಯೇ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ನಡೆದಿದ್ದು, ಕಾಂಗ್ರೆಸ್-ಜೆಡಿಎಸ್‌ನ ಹಲವು ಜನಪ್ರತಿನಿಧಿಗಳು ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವ ಕಂಡಿದೆ.
ಮಧ್ಯಾಹ್ನ ೨ ಗಂಟೆ ಸುಮಾರಿಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅಧಿಕಾರದ ಗೌಪ್ಯತೆ ಬೋಧಿಸಿದರು. ಸಚಿವ ಸಂಪುಟ ವಿಸ್ತರಣೆಯಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಿಗೂ ಪ್ರಾಧ್ಯಾನತೆ ಸಿಕ್ಕಿದೆ. ವಿಶೇಷವಾಗಿ ಮೈಸೂರು ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕಳೆದ ರಾತ್ರಿಯಿಂದ ಆರಂಭಗೊಂಡ ಚಟುವಟಿಕೆ ಬುಧವಾರ ಬೆಳಗ್ಗೆ ೧೧ ಗಂಟೆವರೆಗೂ ಮುಂದುವರೆದಿತ್ತು. ಅಂತಿಮವಾಗಿ ಕಾಂಗ್ರೆಸ್ ಹಾಗೂ ಎಐಸಿಸಿ ವತಿಯಿಂದ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವತಿಯಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಚಿವ ಸಂಪುಟ ಪಟ್ಟಿಗೆ ಅಂತಿಮ ಸ್ಪರ್ಶ ನೀಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟರು.
ಸಂಪುಟ ವಿಸ್ತರಣೆಯಲ್ಲಿ ಮುಖ್ಯವಾಗಿ ಜಾತಿ, ಪ್ರಾದೇಶಿಕತೆ, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಹಾಗೂ ೨೦೧೯ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡಿರುವುದು ಸ್ಪಷ್ಟವಾಗಿದ್ದು, ಯಾವುದೇ ರೀತಿಯ ಭಿನ್ನಮತ, ಅಸಮಾಧಾನಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಉಭಯ ಪಕ್ಷಗಳು ಇನ್ನು ಕೆಲವು ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿವೆ.
ವಿಧಾನಪರಿಷತ್ ಸದಸ್ಯೆ ಡಾ. ಜಯಮಾಲಾ ರಾಮಚಂದ್ರ ಪ್ರಮಾಣ ವಚನ ಸ್ವೀಕರಿಸಿದು ಅಚ್ಚರಿಯ ಬೆಳವಣಿಗೆಯಾಗಿದ್ದು, ಈ ಮೊದಲು ಮಹಿಳಾ ಕೋಟಾದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಕೆಜಿಎಫ್‌ನ ಶಾಸಕಿ ಹಾಗೂ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪನವರ ಪುತ್ರಿ ರೂಪಾ ಶಶಿಧರ್, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಕೇಳಿಬಂದಿತ್ತು. ಮೊದಲ ಬಾರಿಗೆ ಶಾಸಕರಾದವರಿಗೆ ಸಚಿವ ಸ್ಥಾನ ನೀಡಬಾರದೆಂಬ ಹೈಕಮಾಂಡ್ ತೀರ್ಮಾನದಂತೆ ಜಯಮಾಲಾ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಿಗೂ ಪ್ರಾಧ್ಯಾನತೆ ನೀಡಲಾಗಿದ್ದು, ಮೈಸೂರು ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ನೂತನ ಸಂಪುಟ ದರ್ಜೆ ಸಚಿವರ ವಿವರ ಹೀಗಿದೆ:
೧. ಎಚ್.ಡಿ.ರೇವಣ್ಣ (ಜೆಡಿಎಸ್ )
೨. ಆರ್.ವಿ.ದೇಶ್‌ಪಾಂಡೆ (ಕಾಂಗ್ರೆಸ್ )
೩. ಬಂಡೆಪ್ಪ ಕಾಶಂಪೂರ್ (ಜೆಡಿಎಸ್ )
೪. ಡಿ.ಕೆ.ಶಿವಕುಮಾರ್ (ಕಾಂಗ್ರೆಸ್ )
೫. ಜಿ.ಟಿ.ದೇವೇಗೌಡ (ಜೆಡಿಎಸ್)
೬. ಕೆ.ಜೆ.ಜಾರ್ಜ್ (ಕಾಂಗ್ರೆಸ್)
೭. ಡಿ.ಸಿ.ತಮ್ಮಣ್ಣ (ಜೆಡಿಎಸ್ )
೮. ಕೃಷ್ಣ ಭೈರೇಗೌಡ (ಕಾಂಗ್ರೆಸ್)
೯. ಎಂ.ಸಿ.ಮನಗೂಳಿ (ಜೆಡಿಎಸ್)
೧೦. ಎನ್.ಎಚ್. ಶಿವಶಂಕರ್‌ರೆಡ್ಡಿ (ಕಾಂಗ್ರೆಸ್)
೧೧. ಎಸ್.ಆರ್.ಶ್ರೀನಿವಾಸ್(ಜೆಡಿಎಸ್)
೧೨. ರಮೇಶ್ ಲಕ್ಷ್ಮಣ್ ರಾವ್ ಜಾರಕೀಹೊಳಿ(ಕಾಂಗ್ರೆಸ್)
೧೩. ವೆಂಕಟರಾವ್ ನಾಡಗೌಡ (ಜೆಡಿಎಸ್)
೧೪. ಪ್ರಿಯಾಂಕ ಖರ್ಗೆ (ಕಾಂಗ್ರೆಸ್)
೧೫. ಸಿ.ಎಸ್.ಪುಟ್ಟರಾಜು(ಜೆಡಿಎಸ್)
೧೬. ಯು.ಟಿ. ಅಬ್ದುಲ್ ಖಾದರ್ (ಕಾಂಗ್ರೆಸ್)
೧೭. ಸಾಲಿಗ್ರಾಮ ರಾಮೇಗೌಡ ಮಹೇಶ್ (ಜೆಡಿಎಸ್)
೧೮. ಬಿ.ಝಡ್.ಜಮೀರ್ ಅಹ್ಮದ್ ಖಾನ್ (ಕಾಂಗ್ರೆಸ್)
೧೯. ಎನ್.ಮಹೇಶ್ (ಬಿಎಸ್‌ಪಿ)
೨೦. ಶಿವಾನಂದ ಪಾಟೀಲ್ (ಕಾಂಗ್ರೆಸ್)
೨೧. ವೆಂಕಟರಮಣಪ್ಪ (ಕಾಂಗ್ರೆಸ್)
೨೨. ರಾಜಶೇಖರ್ ಬಸವರಾಜ್ ಪಾಟೀಲ್ (ಕಾಂಗ್ರೆಸ್)
೨೩. ಪುಟ್ಟರಂಗ ಶೆಟ್ಟಿ (ಕಾಂಗ್ರೆಸ್ )
೨೪. ಆರ್.ಶಂಕರ್ (ಪಕ್ಷೇತರ)
೨೫. ಡಾ. ಜಯಮಾಲ ರಾಮಚಂದ್ರ (ಕಾಂಗ್ರೆಸ್)
ಹಿರಿಯರಿಗೆ ಕೋಕ್
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಎಂ.ಬಿ. ಪಾಟೀಲ್, ರೋಷನ್ ಬೇಗ್, ಎಂ. ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಸತೀಶ್ ಜಾರಕೀಹೊಳಿ, ಈಶ್ವರ ಖಂಡ್ರೆ, ಎಸ್.ಆರ್. ಪಾಟೀಲ್, ಎಚ್.ಕೆ ಪಾಟೀಲ್, ರಾಮಲಿಂಗಾರೆಡ್ಡಿ ಹಾಗೂ ಮತ್ತಿತರರಿಗೆ ಸಚಿವ ಪದವಿ ಕೈ ತಪ್ಪಿರುವುದು ಅಸಮಾಧಾನಕ್ಕೆ ಎಡೆಮಾಡಿದೆ.
ಪೂರ್ಣ ಪ್ರಮಾಣದ ಸಚಿವ ಸಂಪುಟ ವಿಸ್ತರಣೆಗೆ ಕೈ ಹಾಕದೆ ಕೆಲವು ಸ್ಥಾನಗಳನ್ನು ಉಳಿಸಿಕೊಂಡು ಅಸಮಾಧಾನ ಅತೃಪ್ತಿಗೆ ಅವಕಾಶವಿಲ್ಲದಂತೆ ಸಂಪುಟ ವಿಸ್ತರಣೆಯ ಕಸರತ್ತು ನಡೆಸಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಎಂ.ಬಿ. ಪಾಟೀಲ್, ಹೆಚ್.ಕೆ. ಪಾಟೀಲ್, ರೋಷನ್‌ಬೇಗ್, ಎನ್. ಕೃಷ್ಣಪ್ಪ, ದಿನೇಶ್‌ಗುಂಡೂರಾವ್, ಸತೀಶ್ ಜಾರಕೀಹೊಳಿ, ಈಶ್ವರ್ ಖಂಡ್ರೆ, ಎಸ್.ಆರ್. ಪಾಟೀಲ್, ರಾಮಲಿಂಗಾರೆಡ್ಡಿಗೆ ಸಚಿವ ಪಟ್ಟ ಕೈತಪ್ಪಿದೆ.

LEAVE A REPLY