ಕುಂಭದ್ರೋಣ ಮಳೆಗೆ ಭೂ ಕುಸಿತ: ಹತ್ತಕ್ಕೂ ಅಧಿಕ ಮಂದಿ ಭೂ ಸಮಾಧಿ

ಐಜ್ವಾಲ್: ಈಶಾನ್ಯ ರಾಜ್ಯ ಮಿಜೋರಾಂನ ಲುಂಗ್ಲೀ ಪಟ್ಟಣದಲ್ಲಿ ಮಳೆಯಾರ್ಭಟಕ್ಕೆ ಭೂ ಕುಸಿತ ಉಂಟಾಗಿ ಕಟ್ಟಡವೊಂದು ಕುಸಿದಿದ್ದು, ಈ ಘಟನೆಯಲ್ಲಿ ಕನಿಷ್ಟ ಹತ್ತು ಮಂದಿ ಸಾವನ್ನಪ್ಪಿದ್ದಾರೆ.
ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಲುಂಗ್ವಾನ್ ಪ್ರದೇಶದ ಲುಂಗ್ಲೀಯಲ್ಲಿ ಭೂಕುಸಿತ ಸಂಭವಿಸಿ ಕಟ್ಟಡವೊಮದು ಉರುಳಿಬಿದ್ದಿದೆ.
ಲುಂಗ್ಲೀ ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯ ಸ್ವಯಂ ಕಾರ್ಯಕರ್ತರು ದುರಂತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

LEAVE A REPLY