ಮಾಜಿ ಸಚಿವ ಚಿದಂಬರಂ ಬಂಧನ ಸಧ್ಯಕ್ಕೆ ಬೇಡ : ಇಡಿಗೆ ದೆಹಲಿ ಕೋರ್ಟ್ ಆದೇಶ

ನವದೆಹಲಿ: ಏರ್‌ಸೆಲ್-ಮ್ಯಾಟ್ರಿಕ್ಸ್ ಒಪ್ಪಂದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆಗೆ ಸಂಬಂಧಿಸಿ ಮುಂದಿನ ಜುಲೈ ೧೦ರ ತನಕ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸದಂತೆ ಇಡಿ ಅಧಿಕಾರಿಗಳಿಗೆ ದೆಹಲಿ ಕೋರ್ಟ್ ಆದೇಶ ನೀಡಿದೆ. ಈ ಮೂಲಕ ಚಿದುಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಹೊರಡಿಸಿದೆ.
ಬಂಧನ ಸಂಬಂಧ ದಾಖಲೆಗಳ ಸಲ್ಲಿಕೆಗೆ ಇಡಿ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಕೋರ್ಟ್ ಜು.೧೦ವರೆಗೂ ಬಂಧಿಸದಂತೆ ಆದೇಶ ನೀಡಿದೆ. ಕೇಂದ್ರದ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿವೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಇಡಿ ಪಿ.ಚಿದಂಬರಂಗೆ ಹೊಸ ಸಮನ್ಸ್ ಜಾರಿ ಮಾಡಿತ್ತು. ನಿರೀಕ್ಷಣಾ ಜಾಮೀನು ಅರ್ಜಿ ಚಿದಂಬರಂ ಅರ್ಜಿ ಸಲ್ಲಿಸಿದ್ದರು. ಜು.೫ರವರೆಗೆ ಬಂಧಿಸದಂತೆ ಪಟಿಯಾಲ ಕೋರ್ಟ್ ಮೇ ೩೦ರಂದು ಆದೇಶಿಸಿತ್ತು.

LEAVE A REPLY