ರಾಜ್ಯದಲ್ಲಿ ಮಳೆ: ಗದಗದಲ್ಲಿ ಮಹಿಳೆ ಸಾವು

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಮಳೆಗೆ ಗದಗದಲ್ಲಿ ಮಹಿಳೆಯೊಬ್ಬರು ಜೀವಕಳೆದುಕೊಂಡಿದ್ದಾರೆ.
ಧಾರಾಕರ ಮಳೆಗೆ ಮನೆ ಕುಸಿದು ಈ ಮಹಿಳೆ ಸಾವನ್ನಪ್ಪಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮಳೆಯ ತೀವ್ರತೆ ಅಧಿಕವಾಗಿದ್ದು, ಬೆಳಗಾವಿ, ಧಾರವಾಡ, ಚಿತ್ರದುರ್ಗ, ರಾಮನಗರ, ಹಾವೇರಿ ಮೊದಲಾದ ಕಡೆಗಳಲ್ಲಿಯೂ ಮುಸಲಧಾರೆಯ ಅಬ್ಬರ ಅಧಿಕವಾಗಿದೆ.
ರಾಜ್ಯದಲ್ಲಿ ಬುಧವಾರ ಹಾಗೂ ಗುರುವಾರ ಮಳೆ ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆಯಿದ್ದು, ಸ್ಥಳಿಯಾಡಳಿತಗಳು ಮಳೆ ಪರಿಸ್ಥಿತಿ ನಿರ್ವಹಣೆಗೆ ಭರದ ಸಿದ್ಧತೆ ಮಾಡಿಕೊಂಡಿವೆ.

LEAVE A REPLY