ಅಂತೂ ಹಂಚಿಕೆಯಾಯ್ತು ಮೈತ್ರಿಕೂಟ ಸಂಪುಟದಲ್ಲಿ ಖಾತೆ: ಅವರಿಗೆ ಅಷ್ಟು, ಇವರಿಗೆ ಇಷ್ಟು!

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸಂಪುಟದಲ್ಲಿ ಕಗ್ಗಂಟಾಗಿದ್ದ ಖಾತೆ ಹಂಚಿಕೆ ಕೊನೆಗೊಂಡಿದ್ದು, ಕುತೂಹಲಕ್ಕೆ ತೆರೆಬಿದ್ದಿದೆ.
ಗೃಹ, ಜಲಸಂಪನ್ಮೂಲ, ಕೈಗಾರಿಕೆ ಮತ್ತು ಸಕ್ಕರೆ ಇಲಾಖೆ, ನೀರಾವರಿ, ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ವಿಜ್ಞಾನ ಮತ್ತು ತಂತ್ರಜ್ಞಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರೋಗ್ಯ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಅರಣ್ಯ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ. ಕಾರ್ಮಿಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ, ಬಂದರು, ಒಳನಾಡು ಸಾರಿಗೆ ಇಲಾಖೆ ಕಾಂಗ್ರೆಸ್ ಪಾಲಾಗಿದ್ದರೆ, ಹಣಕಾಸು, ಲೋಕೋಪಯೋಗಿ, ಇಂಧನ, ಉನ್ನತ ಮತ್ತು ಪ್ರಾಥಮಿಕ ಶಿಕ್ಷಣ, ಸಣ್ಣ ಕೈಗಾರಿಕೆ, ಸಾರಿಗೆ, ಯೋಜನೆ ಮತ್ತು ಸಾಂಖ್ಯಿಕ, ಸಣ್ಣ ನೀರಾವರಿ, ಗುಪ್ತಚರ, ಮಾಹಿತಿ ಮತ್ತು ತಂತ್ರಜ್ಞಾನ, ಸಹಕಾರ-ಪ್ರವಾಸೋದ್ಯಮ, ತೋಟಗಾರಿಕೆ ಮತ್ತು ರೇಷ್ಮೆ ಜೆಡಿಎಸ್ ಪಾಲಾಗಿದೆ.
ಕಾಂಗ್ರೆಸ್‌ನ ಡಿಕೆ ಶಿವಕುಮಾರ್ ಗೆ ಇಂಧನ ಖಾತೆ ಕೈತಪ್ಪಿದೆ.
ಖಾತೆ ಹಂಚಿಕೆ ಕುರಿತಂತೆ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಿಎಂ ಎಚ್ ಡಿ ಕುಮಾರ್ ಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ವಿವರ ನೀಡಿದರು.

LEAVE A REPLY