ಪೆಟ್ರೋಲ್ ಆರು, ಡೀಸೆಲ್ ದರ ಐದು ಪೈಸೆ ಮತ್ತೆ ಇಳಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಶುಕ್ರವಾರ ಕ್ರಮವಾಗಿ ೬ ಮತ್ತು ೫ ಪೈಸೆಗಳಷ್ಟು ಇಳಿಕೆಯಾಗಿದೆ.
ಮೊನ್ನೆ ಇಂಧನ ದರಗಳ ಮೇಲೆ ಕೇವಲ ೧ ಪೈಸೆಯಷ್ಟು ದರ ಕಡಿತ ಮಾಡಿದ್ದರಿಂದ ಗ್ರಾಹಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಎರಡನೇ ದಿನವೂ ಅತ್ಯಲ್ಪ ಇಳಿಕೆಯಾಗಿತ್ತು. ಇಂದು ಕೂಡ ಕೊಂಚ ಮಟ್ಟದಲ್ಲಿ ದರ ಇಳಿಸಲಾಗಿದೆ.
ದೆಹಲಿಯಲ್ಲಿ ಈಗ ಪೆಟ್ರೋಲ್ ದರ ಲೀಟರ್‌ಗೆ ೭೭.೨೯ ರೂ,ಗಳು. ನಿನ್ನೆ ಈ ದರ ೭೮.೩೫ ರೂ.ಗಳಿಷ್ಟಿತ್ತು. ಡೀಸೆಲ್ ಬೆಲೆ ೬೯.೨೦ ರೂ.ಗಳಿಗೆ ಇಳಿದಿದೆ. ಮೇ ೧೪ರಿಂದ ಏರುಮುಖದಲ್ಲೇ ಸಾಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಾಗಲೋಟಕ್ಕೆ ಬ್ರೇಕ್ ಬೀಳುತ್ತಿದ್ದು, ಹೆಚ್ಚಿನ ದರ ಇಳಿಕೆ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ಅತ್ಯಲ್ಪ ಪ್ರಮಾಣದ ಇಳಿಕೆ ನೋವು ತಂದಿದೆ.

LEAVE A REPLY