ವರುಣಾರ್ಭಟಕ್ಕೆ ಬೆಚ್ಚಿಬಿದ್ದ ಕುಂದಾನಗರಿ: ಧರೆಗುರುಳಿದ ಆವರಣ ಗೋಡೆ, ಮೊಬೈಲ್ ಟವರ್

ಬೆಳಗಾವಿ: ಶುಕ್ರವಾರ ಸಂಜೆ ಕಾಣಿಸಿಕೊಂಡ ವರುಣಾರ್ಭಟಕ್ಕೆ ಕುಂದಾನಗರಿ ಬೆಚ್ಚಿಬಿದ್ದಿದೆ.
ಸಂಜೆ ಅರಂಭಗೊಂಡ ಮಳೆಗೆ ಗುಡುಗು, ಮಿಂಚು, ಬಿರುಗಾಳಿ ಸಾಥ್ ನೀಡಿದ್ದು, ಆರಂಭದಲ್ಲಿ ತುಂತುರು ಹನಿಯಿಂದ ಅರಂಭಗೊಂಡ ಮಳೆ ಬಳಿಕ ಕೆಲವೇ ಸಮಯದಲ್ಲಿ ಬಿರುಸು ಪಡೆದುಕೊಂಡಿತು. ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು. ಬಡಾವಣೆಗಳಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿನ ಹನುಮಾನ ನಗರ, ತೆಂಗಿನಕೇರಿ ಮೊದಲಾದೆಡೆಗಳಲ್ಲಿ ಮರಗಳು ನೆಲಕ್ಕುರಳಿ ಹಾನಿ ಉಂಟಾಗಿದೆ.
ಜಿಲ್ಲಾಧಿಕಾರಿ ಕಚೇರಿಯ ಆವರಣ ಗೋಡೆ ಕುಸಿತ
ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಆವರಣ ಗೋಡೆ ಕುಸಿದಿದೆ.
ಉರುಳಿದ ಮೊಬೈಲ್ ಟವರ್
ಮಳೆಯೊಂದಿಗೆ ಕಾಣಿಸಿಕೊಂಡ ಗಾಳಿಗೆ ನಗರದ ಕ್ಯಾಂಪ್‌ನಲ್ಲಿ ಎರಡು ಅಂತಸ್ತಿನ ಕಟ್ಟಡದ ಮೇಲಿದ್ದ ಮೊಬೈಲ್ ಟವರ್ ಧರೆಗುರುಳಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

LEAVE A REPLY