ಸುತ್ತೂರುಶ್ರೀ, ಒಡೆಯರ್ ಭೇಟಿ: ಮೈಸೂರು ಚುನಾವಣಾ ಅಖಾಡದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ ಶಾ!

ಮೈಸೂರು: ರಾಜ್ಯ ಭೇಟಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಶುಕ್ರವಾರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಬಳಿಕ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಪ್ರತಾಪ್‌ಸಿಂಹ ಅವರೊಂದಿಗೆ ಅರಮನೆಗೆ ಭೇಟಿ ನೀಡಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಮಾತುಕತೆ ನಡೆಸಿದರು.
ಶಾ ಅವರಿಗೆ ಅರಮನೆ ವತಿಯಿಂದ ಕಮಲದ ಹೂವನ್ನು ನೀಡಿ ಸ್ವಾಗತಿಸಲಾಯಿತು.
ಒಡೆಯರ್ ಕುಟುಂಬದ ಆಸ್ತಿಗಡ ಸಂಬಂಧಿಸಿ ರಾಜ್ಯ ಸರಕಾರದಿಂದ ಕೆಲವು ಸಮಸ್ಯೆಗಳಿದ್ದು, ಇವುಗಳನ್ನು ಬಗೆಹರಿಸುವ ಕುರಿತು ಶಾ ಹಾಗೂ ಪ್ರಮೋದಾದೇವಿ ಮಾತುಕತೆ ನಡೆಸಿದರೆಂದು ಮೂಲಗಳು ತಿಳಿಸಿವೆ.
ಬಳಿಕ ಕ್ಯಾತಮಾರನಹಳ್ಳಿಗೆ ತೆರಳಿದ ಶಾ, ಹತ್ಯೆಗೀಡಾಗಿದ್ದ ಬಿಜೆಪಿ ಮುಖಂಡ ರಾಜು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

LEAVE A REPLY