ಮತ್ತೊಂದು ಸ್ವರ್ಣ ಮೆಡಲ್: ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಆರಳಿತು ಭಾರತದ ’ಮುಸ್ಕಾನ್’!

ಸಿಡ್ನಿ: ಕಿರಿಯರ ವಿಶ್ವಕಪ್ ಟೂರ್ನಿಯ ಅಂತಿಮ ದಿನವಾದ ಬುಧವಾರವೂ ಭಾರತದ ಶೂಟರ್ ಮುಸ್ಕಾನ್ ಬಾನ್‌ವಾಲಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂಲಕ ಕಿರಿಯರ ವಿಶ್ವಕಪ್‌ನಲ್ಲಿ ಭಾರತದ ಸ್ವರ್ಣ ಬೇಟೆ ಮುಂದುವರಿದಿದೆ.
ಮಹಿಳೆಯ ಪಿಸ್ತೂಲ್ ವಿಭಾಗದ ೨೫ ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಮುಸ್ಕಾನ್ ಫೈನಲ್ಸ್‌ನಲ್ಲಿ ೩೫ ಹಿಟ್ಸ್‌ಗಳನ್ನು ಯಶಸ್ವಿಗೊಳಿಸುವ ಮೂಲಕ ಅಗ್ರಸ್ಥಾನಿಯಾಗಿ ಮುಸ್ಕಾನ್ ಬಾನ್‌ವಾಲಾ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರು. ಚೀನಾದ ಕ್ವಿನ್ ಶಿಯಾಂಗ್ , ಥೈಯ್ಲಾಂಡ್‌ನ ಕ್ಯಾನಾಕ್ರೋನ್ ಹಿರುನ್‌ಪೋಯೆಮ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದು ನಗೆ ಚೆಲ್ಲಿದರು. ಮುಸ್ಕಾನ್ ಗಳಿಸಿದ ಚಿನ್ನದ ಪದಕದೊಂದಿಗೆ ಐಎಸ್‌ಎಸ್‌ಎಫ್ ಕಿರಿಯರ ವಿಶ್ವಕಪ್‌ನಲ್ಲಿ ಭಾರತ ತಂಡವು ೪ ಸ್ವರ್ಣ ಮೆಡಲ್ ಗೆದ್ದಂತಾಗಿದೆ.

LEAVE A REPLY