ಟರ್ಕಿ ಸೇನೆಯಿಂದ ದಿಢೀರ್ ವಾಯು ದಾಳಿ: 42 ಭಯೋತ್ಪಾದಕರ ಸಂಹಾರ

ಅಂಕಾರ: ಟರ್ಕಿ ಸೇನೆ, ಇರಾಕ್‌ನ ಕಂದಿಲ್ ಪ್ರಾಂತ್ಯದಲ್ಲಿ ನಡೆಸಿದ ವಾಯು ದಾಳಿಯಲ್ಲಿ ೪೨ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಕುರ್ದಿಶ್ ವರ್ಕರ್ಸ್ ಪಾರ್ಟಿಗೆ(ಕೆಡಬ್ಲ್ಯಪಿ) ಸೇರಿದ ಉಗ್ರರನ್ನು ಬಂಧಿಸಬೇಕು ಇಲ್ಲವೇ ಹೊಡೆದುರುಳಿಸ ಬೇಕು ಎಂದು ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವೈಮಾನಿಕ ಕಾರ್ಯಾಚರಣೆ ನಡೆಸಿದ ಸೇನೆ, ೪೨ ಮಂದಿ ಉಗ್ರರನ್ನು ಸದೆಬಡಿದಿದೆ. ಕೆಡಬ್ಲ್ಯುಪಿ ಹಾಗೂ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಗೆ ಸೇರಿದ ೩,೭೩೩ ಉಗ್ರರನ್ನು ಟರ್ಕಿ ಸೇನೆ ಈವರೆಗೆ ಹತ್ಯೆ ಮಾಡಿದೆ.

LEAVE A REPLY