ಆಧಾರ್ ಲಿಂಕ್‌ಗೆ ಅವಧಿ ವಿಸ್ತರಣೆ: ಬಿಗ್ ರಿಲೀಫ್ ನೀಡಿದ ಕೇಂದ್ರ ಸರಕಾರ

ನವದೆಹಲಿ: ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಲು ಆಧಾರ್ ಕಾರ್ಡ್ ಜೋಡಿಸಬೇಕಿದ್ದ ಅವಧಿಯನ್ನು ವಿಸ್ತರಿಸುವ ಮೂಲಕ ಕೇಂದ್ರ ಸರ್ಕಾರ ನಾಗರಿಕರಿಗೆ ಬಿಗ್ ರಿಲೀಫ್ ಕೊಟ್ಟಿದೆ.
ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ನಂಬರ್ ಒದಗಿಸಲು ಮಾ.೩೧ ಕೊನೆ ದಿನಾಂಕವಾಗಿತ್ತು. ಈ ಅವಧಿಯನ್ನು ಕೇಂದ್ರ ಸರ್ಕಾರ ಜೂನ್ ೩೦ರವರೆಗೆ ವಿಸ್ತರಿಸಿದೆ.
ಮೊಬೈಲ್ ಸಿಮ್ ಕಾರ್ಡ್, ಬ್ಯಾಂಕ್ ಅಕೌಂಟ್ ಮೊದಲಾದವುಗಳಿಗೆ ಆಧಾರ್ ಲಿಂಕ್ ಕಡ್ಡಾಯದ ಡೆಡ್‌ಲೈನ್ ವಿಸ್ತರಿಸಿ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ಆದೇಶ ನೀಡಿತ್ತು. ಇದಲ್ಲದೆ ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಗಡುವನ್ನು ಜೂನ್ ೩೦ರ ವರೆಗೆ ವಿಸ್ತರಿಸಿ ಸಿಬಿಡಿಟಿ ಆದೇಶಿಸಿತ್ತು. ಇದರ ಬೆನ್ನಲ್ಲೇ ಈ ಅವಧಿ ವಿಸ್ತರಣಾ ಆದೇಶ ಹೊರಬಿದ್ದಿದೆ.

LEAVE A REPLY