ಬರೋಬ್ಬರಿ 2,500 ಕೋಟಿ ರೂ. ತೆರಿಗೆ ವಂಚನೆ: ಕಾಗ್ನಿಜಾಂಟ್ ಖಾತೆಗಳಿಗೆ ಐಟಿ ಬೀಗ!

ಚೆನ್ನೈ: ಬರೋಬ್ಬರಿ ೨,೫೦೦ ಕೋಟಿ ರೂ. ತೆರಿಗೆ ವಂಚಿದ ಆರೋಪದಲ್ಲಿ ಕಾಗ್ನಿಜಾಂಟ್ ಟೆಕ್ನೋಲಾಜಿಸ್ ಸೆಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಸಿಟಿಎಸ್) ಸಂಸ್ಥೆಯ ಕೆಲವು ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿದೆ.
ಆದಾಯ ತೆರಿಗೆ ಕಾಯ್ದೆ ಪ್ರಕಾರ, ಸಂಚಿತ ಲಾಭದ ಮೇಲೆ ಯಾವುದೇ ವಿತರಣೆ ಮೇಲೆ ಡಿಡಿಟಿಯನ್ನು ಪಾವತಿಸಬೇಕು. ಆದರೆ ಕಾಗ್ನಿಜಾಂಟ್, ೨೦೧೬-೧೭ನೇ ಸಾಲಿಗೆ ೨,೫೦೦ ಕೋಟಿ ರೂ.ಗಳ ತನಕ ಡಿಡಿಟಿಯನ್ನು ಪಾವತಿಸಿಲ್ಲ. ಪಾವತಿಯಾಗದ ಲಾಭಾಂಶ ವಿತರಣಾ ತೆರಿಗೆಯನ್ನು ವಸೂಲು ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿವೆ.
ಕಾಗ್ನಿಜಾಂಟ್, ಲಾಭಾಂಶ ವಿತರಣಾ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಿತ್ತು. ಇದನ್ನು ವಸೂಲಿ ಮಾಡಲು ಐಟಿ ಅಧಿಕಾರಿಗಳು ಸಿಟಿಎಸ್‌ನ ಬ್ಯಾಂಕ್ ಅಕೌಂಟ್‌ಗಳನ್ನು ಜಪ್ತಿ ಮಾಡಿದೆ. ಇದೀಗ ಚೆನ್ನೈ ಮತ್ತು ಮುಂಬೈನಲ್ಲಿ ೨,೫೦೦ ಕೋಟಿ ರೂ.ಗಳವರೆಗೆ ಠೇವಣಿಗಳಿರುವ ಕಾಗ್ನಿಜಾಂಟ್‌ನ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

LEAVE A REPLY