ಮಾವೋವಾದಿಗಳ ತಂಡದಿಂದ ಮನೆಗೆ ನುಗ್ಗಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

ರಾಯ್‌ಪುರ್: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಬಸ್ತಾರ್‌ನಲ್ಲಿ ಮಾವೋವಾದಿಗಳು ಬಿಜೆಪಿ ಮುಖಂಡರೋರ್ವರನ್ನು ಹತ್ಯೆಗೈದಿದ್ದಾರೆ.
ಜಗದೀಶ್ ಕೊಂದ್ರಾ ಹತ್ಯೆಗೊಳಗಾದವರು. ಅವರ ಮನೆಗೆ ನುಗ್ಗಿದ ನಾಲ್ವರು ಮಾವೋವಾದಿಗಳ ತಂಡ ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಜಗದೀಶ್‌ರನ್ನು ಆಸ್ಪತ್ರೆಗೆ ಕರೆದೊಯ್ಯುವ ಯತ್ನ ನಡೆಸಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಅಚ್ಚರಿಯೆಂದರೆ ಪೊಲೀಸ್ ಠಾಣೆಯಿಂದ ಕೇವಲ ೧೦೦ ಮೀಟರ್ ದೂರದಲ್ಲಿ ಈ ಕೃತ್ಯ ನಡೆದಿದೆ. ಹಂತಕರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಮಾವೋವಾದಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

LEAVE A REPLY