ಸೌದಿ ನಗರಗಳ ಮೇಲೆ ಏಳು ಕ್ಷಿಪಣಿ ದಾಳಿ: ಹೊಡೆದುರುಳಿಸಿದ ಸೇನಾ ಪಡೆ

ರಿಯಾದ್: ಸೌದಿ ರಾಜಧಾನಿ ರಿಯಾದ್ ಸಹಿತ ಹಲವು ಸ್ಥಳಗಳಿಗೆ ಗುರಿಯಾಗಿ ಉಗ್ರರು ಏಳು ಕ್ಷಿಪಣಿ ದಾಳಿ ನಡೆಸಿದ್ದು, ಸೇನಾ ಪಡೆಗಳು ಇವುಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿವೆ.
ರಿಯಾದ್ ಮೇಲೆ ಮೂರು, ಖಾಮಿಸ್, ಮುಷೈತ್, ಜಿಝಾನ್ ಮತ್ತು ನರ್ಜಾನ್ ನಗರಗಳ ಮೇಲೆ ನಾಲ್ಕು ಕ್ಷಿಪಣಿಗಳನ್ನು ಉಗ್ರರು ಉಡಾಯಿಸಿದ್ದು, ಭದ್ರತಾಪಡೆಗಳು ಅವುಗಳನ್ನು ಹೊಡೆದುರುಳಿಸುವ ಮೂಲಕ ಭಾರೀ ದುರಂತ ತಪ್ಪಿಸಿದ್ದಾರೆ. ಈ ಘಟನೆಯಲ್ಲಿ ನಡೆದಿರಬಹುದಾದ ಸಾವುನೋವಿನ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ಯಾಕೀ ದಾಳಿ?
ಯೆಮೆನ್ ಮೇಲೆ ಸೌದಿ ನೇತೃತ್ವದ ಮಿತ್ರಪಡೆಗಳು ನಡೆಸಿದ ಸೇನಾ ಕಾರ್ಯಾಚರಣೆಯ ತೃತೀಯ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರತೀಕಾರದ ದಾಳಿ ಇದಾಗಿದೆ ಎಮದು ಮಾಧ್ಯಮಗಳು ವರದಿ ಮಾಡಿವೆ. ಕ್ಷಿಪಣಿಗಳ ದಾಳಿ ಹಾಗೂ ನಂತರದ ಕಾರ್ಯಾಚರಣೆ ಸಂದರ್ಭ ಭಾರೀ ಸದ್ದು ಹಾಗೂ ಬೆಂಕಿಯ ಜ್ವಾಲೆಗಳು ಗೋಚರಿಸಿದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

LEAVE A REPLY