ಮೇವು ಹಗರಣದ 4ನೇ ಪ್ರಕರಣ: ಲಾಲೂಗೆ ಮತ್ತೆ ಏಳು ವರ್ಷ ಜೈಲೂಟ!

ಜಾರ್ಖಂಡ್: ಮೇವು ಹಗರಣದ ೪ನೇ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತೆ ೭ ವರ್ಷ ಜೈಲು ಶಿಕ್ಷೆಗೊಳಗಾಗಿದ್ದಾರೆ.
ಜಾರ್ಖಂಡ್‌ನ ವಿಶೇಷ ಸಿಬಿಐ ಕೋರ್ಟ್, ಮೇವು ಹಗರಣದ ೪ನೇ ಪ್ರಕರಣಕ್ಕೆ ಸಂಬಂಧಿಸಿ ಲಾಲೂಗೆ ೭ ವರ್ಷ ಜೈಲು ಶಿಕ್ಷೆ ಹಾಗೂ ೩೦ ಲಕ್ಷ ದಂಡ ವಿಧಿಸಿದೆ.
ಧುಮ್ಕಾ ಖಜಾನೆಯಿಂದ ೧೯೯೫ರ ಡಿಸೆಂಬರ್‌ನಿಂದ ೧೯೯೬ರ ಜನವರಿಯೊಳಗೆ ೩.೧೩ ಕೋಟಿ ಹಣವನ್ನು ಅಕ್ರಮವಾಗಿ ತೆಗೆದುಕೊಂಡಿರುವ ಪ್ರಕರಣದಲ್ಲಿ ಲಾಲು ಅಪರಾಧ ಸಾಬೀತಾಗಿದೆ.

LEAVE A REPLY