ಸೋನಿಯಾ ಆರೋಗ್ಯದಲ್ಲಿ ಏರುಪೇರು: ಶಿಮ್ಲಾದಿಂದ ದೆಹಲಿಗೆ ತುರ್ತು ವಾಪಸ್

file photo

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾ ಪ್ರವಾಸದಲ್ಲಿರುವ ಯುಪಿಎ ಮುಖ್ಯಸ್ಥೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ದೆಹಲಿಗೆ ವಾಪಸ್ ಕರೆತರಲಾಗಿದೆ.
ಪುತ್ರಿ ಪ್ರಿಯಾಂಕಾ ಗಾಂಧಿಯೊಂದಿಗೆ ಎರಡು ದಿನಗಳ ಕಾಲ ಶಿಮ್ಲಾ ಪ್ರವಾಸದಲ್ಲಿದ್ದ ಸೋನಿಯಾಗೆ ಕಳೆದ ರಾತ್ರಿ ಶಿಮ್ಲಾದ ಹೋಟೆಲ್‌ನಲ್ಲಿ ತಂಗಿದ್ದಾಗ ಸೋನಿಯಾ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಶಿಮ್ಲಾದಿಂದ ಚಂಡೀಗಢ್‌ನ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಕರೆತರಲಾಗಿದ್ದು, ತಪಾಸಣೆ ನಡೆಸಿದ ವೈದ್ಯರು, ದೆಹಲಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಇಂದು ಬೆಳಗ್ಗೆ ವಿಮಾನದ ಮೂಲಕ ಸೋನಿಯಾರನ್ನು ದೆಹಲಿಗೆ ಕರೆದೊಯ್ಯಲಾಗಿದೆ. ಸೋನಿಯಾ ಆರೋಗ್ಯ ಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

LEAVE A REPLY