ಸತತ ನಾಲ್ಕನೇ ಅವಧಿಗೂ ರಷ್ಯಾ ಗದ್ದುಗೆ ಗಟ್ಟಿಮಾಡಿದ ಪುಟಿನ್!

ಮಾಸ್ಕೋ: ಸತತ ನಾಲ್ಕನೇ ಅವಧಿಗೂ ವ್ಲಾಡಿಮಿರ್ ಪುಟಿನ್ ರಷ್ಯಾ ಆಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಸರಿ ಸುಮಾರು ಎರಡು ದಶಕಗಳಿಂದ ರಷ್ಯಾ ಆಳುತ್ತಿರುವ ಅವರು ಮತ್ತೆ ಮುಂದಿನ ಆರು ವರ್ಷಗಳ ಕಾಲ ಅಧ್ಯಕ್ಷೀಯ ಸ್ಥಾನವನ್ನು ಭದ್ರಗೊಳಿಸಿದ್ದಾರೆ.
ಚುನಾವಣಾ ಫಲಿತಾಂಶದಂತೆ ಪುಟಿನ್‌ಗೆ ಶೇ. ೭೩.೯ ಮತ ದೊರೆತಿದೆ. ಈ ನಡುವೆ ಫಲಿತಾಂಶದ ಕುರಿತಂತೆ ಆರೋಪ ನಡೆಸಿರುವ ವಿರೋಧ ಪಕ್ಷ, ಇದು ಅನೈತಿಕತೆಯ ಪರಮಾವದಿ, ಬ್ಯಾಲಟ್ ಪೇಪರ್‌ನಲ್ಲಿ ವಂಚನೆ ನಡೆದಿದೆ ಎಂದು ದೂರಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪುಟಿನ್, ಫಲಿತಾಂಶ ಉತ್ತಮವಾಗಿರುತ್ತದೆ ಎಂಬ ಆತ್ಮವಿಶ್ವಾಸವಿತ್ತು. ನಮ್ಮ ದೇಶದ ಮಕ್ಕಳ ಮುಂದಿನ ಭವಿಷ್ಯದ ಪರವಾಗಿ ಆಡಳಿತದ ದೃಷ್ಟಿಯಿರುತ್ತದೆ ಎಂದು ಹೇಳಿದ್ದಾರೆ. ಅಂದಹಾಗೆ ಜೋಸೆಫ್ ಸ್ಟಾಲಿನ್ ಬಳಿಕ ಅತೀ ಹೆಚ್ಚು ಕಾಲ ರಷ್ಯಾವನ್ನಾಳಿದ ಅಧ್ಯಕ್ಷ ಎಂಬ ಕೀರ್ತಿಗೂ ಪುಟಿನ್ ಭಾಜನರಾಗಿದ್ದಾರೆ.

LEAVE A REPLY