ಮೇವು ಹಗರಣದ ನಾಲ್ಕನೇ ತೀರ್ಪು: ಲಾಲು ಹಣೆಬರಹ ಬರೆಯಲಿದೆ ಸಿಬಿಐ ಕೋರ್ಟ್

ರಾಂಚಿ: ದುಮ್ಕಾ ಟ್ರೆಶರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಹೊರಬೀಳಲಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಭವಿಷ್ಯ ನಿರ್ಧಾರವಾಗಲಿದೆ.
ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕನೇ ಪ್ರಕರಣ ಇದಾಗಿದ್ದು, ಮೊದಲ ಮೂರು ಆರೋಪಗಳಲ್ಲಿ ಲಾಲು ದೋಷಿ ಎಂದು ಪರಿಗಣಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ಮೂರು ಪ್ರಕರಣಗಳಲ್ಲಿ ಒಟ್ಟು ೧೩.೫ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೀಗ ನಾಲ್ಕನೇ ಪ್ರಕರಣದ ತೀರ್ಪು ಇಂದು ಹೊರಬೀಳಲಿದೆ. ಮಾ. ಮಾ.೧೭ ರಂದೇ ನೀಡಬೇಕಿದ್ದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಮಾ.೧೯ ಕ್ಕೆ ಮುಂದೂಡಿತ್ತು.

LEAVE A REPLY