ಪ್ರಸಿದ್ಧ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ

ಕೆಂಬ್ರಿಡ್ಜ್: ಪ್ರಸಿದ್ಧ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಧಿವಶರಾಗಿದ್ದಾರೆ.
ಭೌತಶಾಸ್ತ್ರಜ್ಞರಾಗಿ ಸುಮಾರು ೪೦ ವರ್ಷಗಳ ಸುದೀರ್ಘ ಕಾಲ ಅನುಭವದ ಮೂಲಕ ಹಲವು ಪುಸ್ತಕಗಳು, ಅಧ್ಯಯನ ಗ್ರಂಧಗಳನ್ನು ವಿಜ್ಞಾನ ಲೋಕಕ್ಕೆ ನೀಡುವ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಪಡೆದಿದ್ದ ಅವರು, ತಮ್ಮ ನಿವಾಸದಲ್ಲಿ ಬುಧವಾರ ವಿಧಿವಶರಾಗಿದ್ದರು. ಅವರಿಗೆ ೭೬ ವರ್ಷ ವಯಸ್ಸಾಗಿತ್ತು.
ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಗೌರವಾನ್ವಿತ ವ್ಯಕ್ತಿಯಾಗಿದ್ದ ಹಾಕಿಂಗ್ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಆಜೀವ ಸದಸ್ಯತ್ವ ಹೊಂದಿದ್ದರು.

LEAVE A REPLY