ಫೋನ್ ಕಾಲ್ ಡಾಟಾ ದಂಧೆ: ನಟ ನವಾಜುದ್ದೀನ್ ಸಿದ್ದಿಕಿ, ಪತ್ನಿಗೆ ಸಮನ್ಸ್

ಥಾಣೆ: ಫೋನ್ ಕಾಲ್ ಡಾಟಾ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿಗೆ ಥಾಣೆ ಕ್ರೈಂ ಬ್ರಾಂಚ್ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
ಫೋನ್ ಕಾಲ್ ಡಾಟಾ ಲೀಕ್ ಮಾಡುತ್ತಿದ್ದ ಬಹುದೊಡ್ಡ ಜಾಲವನ್ನು ಕ್ರೈಂ ಬ್ರಾಂಚ್ ಪೊಲೀಸರು ಪತ್ತೆ ಹಚ್ಚಿದ್ದರು. ಈ ಸಂಬಂಧ ೧೧ ಮಂದಿಯನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಈ ಬೆಳವಣಿಗೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ವಕೀಲ ರಿಜ್ವಾನ್ ಸಿದ್ಧಿಕಿ ಎಂಬುವರು ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿಯ ಫೋನ್ ಕಾಲ್ ಡಾಟಾವನ್ನು ಖಾಸಗಿ ಪತ್ತೆದಾರರ ಮೂಲಕ ಪಡೆಯುತ್ತಿದ್ದರು ಎಂದು ವಿಚಾರಣೆ ವೇಳೆ ಆರೋಪಿಯೊಬ್ಬ ಹೇಳಿದ್ದು, ಈ ಹಿನ್ನೆಲೆಯಲ್ಲಿ ನಟ ಹಾಗೂ ಆತನ ಪತ್ನಿಗೆ ಹೆಚ್ಚಿನ ವಿಚಾರಣೆಗಾಗಿ ಸಮನ್ಸ್ ನೀಡಲಾಗಿದೆ.
ಏನಿದು ಫೋನ್ ಕಾಲ್ ಡಾಟಾ ದಂಧೆ?
ಖಾಸಗಿ ಪತ್ತೆದಾರಿ ಏಜೆನ್ಸಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಲಾಗಿನ್ ಐಡಿ ಬಳಸಿ ನೆಟ್‌ವರ್ಕ್ ಸೇವೆ ನೀಡುವ ಕಂಪನಿಗಳಿಂದ ಗ್ರಾಹಕರ ಫೋನ್ ಕಾಲ್ ವಿವರವನ್ನು ಪಡೆದು ಬಳಿಕ ಅದನ್ನು ೩೦ರಿಂದ ೫೦ ಸಾವಿರ ಹಣಕ್ಕೆ ಮಾರುತ್ತಾರೆ. ಇದು ಕಾನೂನು ಬಾಹಿರವಾಗಿದ್ದು, ಈ ದಂಧೆಯನ್ನು ಇತ್ತೀಚೆಗೆ ಪೊಲೀಸರು ಬೇಧಿಸಿದ್ದರು.

LEAVE A REPLY