ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 18 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಿರುವ ಸರಕಾರ, ೧೮ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರದ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪ್ರಾಥಮಿಕ ವರದಿಯಂತೆ ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಹೀಗಿದೆ:
ಬಿ. ದಯಾನಂದ, ಆರ್‌ಟಿಒ ಕಮಿಷನರ್ ಹುದ್ದೆಯಿಂದ ಕೇಂದ್ರ ವಲಯ ಐಜಿಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಕೇಂದ್ರ ವಿಭಾಗದ ಐಜಿಪಿಯಾಗಿದ್ದ ಅಮೃತ್ ಪ್ರಸಾದ್ ಆಡಳಿತ ವಿಭಾಗದ ಐಜಿಪಿಯಾಗಿ ನೇಮಕಗೊಂಡಿದ್ದಾರೆ. ಆಡಳಿತ ವಿಭಾಗದ ಐಜಿಪಿ ಉಮೇಶ್ ಕುಮಾರ್ ರನ್ನು ಗೃಹ ಇಲಾಖೆ ಕಾರ್ಯದರ್ಶಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಅಗ್ನಿಶಾಮಕ ಸೇವೆ ನಿರ್ದೇಶಕ ಸೌಮೇಂದು ಮುಖರ್ಜಿ ದಕ್ಷಿಣ ವಲಯದ ಐಜಿಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಬಳ್ಳಾರಿ ವಲಯದ ಐಜಿಪಿಯಾಗಿ ಎಸ್. ರವಿ ಅವರನ್ನು ನೇಮಿಸಲಾಗಿದೆ. ದಕ್ಷಿಣ ವಲಯದ ಐಜಿಪಿಯಾಗಿದ್ದ ವಿಪುಲ್ ಕುಮಾರ್ ಪೊಲೀಸ್ ಅಕಾಡೆಮಿಯ ನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಬಳ್ಳಾರಿ ವಲಯದ ಐಜಿಪಿಯಾಗಿದ್ದ ಎನ್.ಶಿವಪ್ರಸಾದ್ ಕೆಎಸ್‌ಆರ್‌ಟಿಸಿ ಭದ್ರತೆ ಮತ್ತು ವಿಚಕ್ಷಣಾ ವಿಭಾಗದ ನಿರ್ದೇಶಕರಾಗಿ ನೇಮಕಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿದ್ದ ಅಮಿತ್ ಸಿಂಗ್ ಅವರನ್ನು ಮೈಸೂರು ಜಿಲ್ಲೆ ಎಸ್‌ಪಿ ಸ್ಥಾನಕ್ಕೆ ವರ್ಗಾಯಿಸಲಾಗಿದ್ದು, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ಅವರನ್ನು ಸಿಐಡಿ ಎಸ್‌ಪಿ ಹುದ್ದೆಗೆ ನೇಮಿಸಲಾಗಿದೆ.
ಇನ್ನು ಮೈಸೂರು ಜಿಲ್ಲೆ ಎಸ್‌ಪಿ ರವಿ ಚನ್ನಣ್ಣನವರ್ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ನೇಮಕಗೊಳಿಸಲಾಗಿದ್ದು, ವಿಜಯಪುರ ಎಸ್‌ಪಿಯಾಗಿದ್ದ ಕುಲದೀಪ್ ಕುಮಾರ್‌ರನ್ನು ಕೆಎಸ್‌ಆರ್‌ಪಿ ಕಮಾಂಡೆಂಟ್ ಆಗಿ ನೇಮಕ ಮಾಡಲಾಗಿದೆ. ವಿಜಯಪುರ ಎಸ್‌ಪಿಯಾಗಿ ನಿಖಮ್ ಕುಮಾರ್ ನೇಮಕಗೊಂಡಿದ್ದಾರೆ. ದಾವಣಗೆರೆ ಎಸ್‌ಪಿಯಾಗಿದ್ದ ಭೀಮಾ ಶಂಕರ್ ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿ, ಮಂಡ್ಯ ಎಸ್‌ಪಿಯಾಗಿದ್ದ ರಾಧಿಕಾ ಅವರನ್ನು ಬೆಂಗಳೂರು ಎಸಿಬಿ ಎಸ್‌ಪಿಯಾಗಿ, ಕೊಪ್ಪಳ ಎಸ್‌ಪಿಯಾಗಿದ್ದ ಅನೂಪ್ ಶೆಟ್ಟಿ ಅವರನ್ನು ಬೆಂಗಳೂರು ಗುಪ್ತದಳದ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.
ಹುಬ್ಬಳ್ಳಿ ಧಾರವಾಡ ಡಿಸಿಪಿಯಾಗಿದ್ದ ರೇಣುಕಾ ಸುಕುಮಾರ್‌ರನ್ನು ಕೊಪ್ಪಳ ಎಸ್‌ಪಿ ಸ್ಥಾನಕ್ಕೆ, ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿದ್ದ ಗಿರೀಶ್‌ರನ್ನು ಮಂಡ್ಯ ಜಿಲ್ಲೆ ಎಸ್‌ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದ್ದು, ಎಸಿಬಿ ಎಸ್‌ಪಿ ಕಲಾ ಕೃಷ್ಣಮೂರ್ತಿ ಅವರನ್ನು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಸ್ಥಾನಕ್ಕೆ ವರ್ಗ ಮಾಡಲಾಗಿದೆ.

LEAVE A REPLY