ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಫಾರೂಕ್ ಟಕ್ಲಾ ಅರೆಸ್ಟ್

ನವದೆಹಲಿ: ೧೯೯೩ ಮುಂಬೈ ಸ್ಪೋಟದ ನಂತರ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಫಾರೂಕ್ ಟಕ್ಲಾನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ದಾವೂದ್ ಇಬ್ರಾಹಿಂನ ಎಲ್ಲಾ ಕೃತ್ಯಗಳಲ್ಲಿ ಭಾಗಿಯಾಗುತಿದ್ದ ಟಕ್ಲಾನನ್ನು ದುಬೈನಿಂದ ಗಡೀಪಾರುಮಾಡಲಾಗಿತ್ತು. ಗುರುವಾರ ಸಂಜೆ ೪.೪೫ರ ಸುಮಾರಿಗೆ ಮುಂಬೈಗೆ ಆತನ್ನು ಕರೆತರಲಿರುವ ಅಧಿಕಾರಿಗಳು, ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

LEAVE A REPLY