ನೀರವ್ ಮೋದಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಿದ ಸಿಬಿಐ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಇದೀಗ ವಜ್ರದ ವ್ಯಾಪಾರಿ ನೀರವ್ ಮೋದಿ ವಿರುದ್ಧ ಸಿಬಿಐ ಮತ್ತೊಂದು ೩೨೧ ಕೋಟಿ ಹಗರಣ ಪ್ರಕರಣದ ಎಫ್‌ಐಆರ್ ದಾಖಲಿಸಿದೆ.
ಫೈರ್‌ಸ್ಟಾರ್ ಡೈಮಂಡ್ ಅಂತಾರಾಷ್ಟ್ರೀಯ ಕಂಪನಿಯ ಅಧ್ಯಕ್ಷ ವಿಪುಲ್ ಅಂಬಾನಿ, ಮುಖ್ಯ ಹಣಕಾಸು ಅಧಿಕಾರಿ ರವಿ ಗುಪ್ತಾ, ಕಂಪನಿಯ ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ನೀರವ್ ೧೨,೬೩೬ ಕೋಟಿ ರೂ.ಗಳ ಹಗರಣ ಆರೋಪ ಎದುರಿಸುತ್ತಿದ್ದಾರೆ. ಕ್ರೆಡಿಟ್ ಸೌಲಭ್ಯಗಳನ್ನು ವಿಸ್ತರಿಸಿದ್ದರಿಂದ ೩೨೧ ಕೋಟಿ ನಷ್ಟವಾಗಿದೆ ಎಂದು ಮಾ. ೪ರಂದು ಪಿಎನ್‌ಬಿ ಬ್ಯಾಂಕ್ ದೂರು ದಾಖಲಿಸಿತ್ತು. ದೂರಿನನ್ವಯ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ನೀರವ್ ಮೋದಿ ಹೆಸರು ಇದೆ.
ನೀರವ್ ಮೋದಿ ಫೈರ್ ಸ್ಟಾರ್ ಡೈಮಂಡ್ ಕಂಪನಿ ಜೊತೆಗೂ ಸಹಭಾಗಿತ್ವ ಹೊಂದಿದ್ದು, ಈ ಕಂಪನಿಗೆ ಮುಂಬೈನ ಬ್ರಿಡಿ ಬ್ಯಾಂಕ್ ರೋಡ್ ಬ್ರಾಂಚ್‌ನಿಂದ ೨೦೧೩ರಿಂದ ೨೦೧೭ರವರೆಗೂ ಕ್ರಿಡಿಟ್ ಸೌಲಭ್ಯ ವಿಸ್ತರಿಸಿದ್ದರಿಂದ ನಷ್ಟವಾಗಿದೆ ಎಂದು ನೀರವ್ ಮೋದಿ ವಿರುದ್ಧ ಪಿಎನ್‌ಬಿ ದೂರು ದಾಖಲಿಸಿತ್ತು.

LEAVE A REPLY