ನಕ್ಸಲ್ ರಿವೇಂಜ್: ಛತ್ತೀಸ್‌ಗಢದಲ್ಲಿ ಮಾಜಿ ಪೇದೆಯ ಹತ್ಯೆ, ವಾಹನಗಳಿಗೆ ಬೆಂಕಿ

ರಾಯ್‌ಪುರ್: ತೆಲಂಗಾಣದ ಭದ್ರಾದ್ರಿ ಅರಣ್ಯ ಪ್ರದೇಶದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗೆ ಪ್ರತಿಯಾಗಿ ಮಾವೋವಾದಿಗಳು ಛತ್ತೀಸ್‌ಗಢದಲ್ಲಿ ಹಿಂಸಾಚಾರ ನಡೆಸಿದ್ದು, ಈ ಘಟನೆಯಲ್ಲಿ ಪೊಲೀಸ್ ಮಾಜಿ ಪೇದೆಯೊಬ್ಬರು ಹುತಾತ್ಮನಾಗಿದ್ದು, ಮೂರು ಸರ್ಕಾರಿ ಬಸ್‌ಗಳೂ ಸೇರಿದಂತೆ ಆರು ವಾಹನಗಳು ಬೆಂಕಿಗಾಹುತಿಯಾಗಿವೆ.
ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ಕತ್ತಿ ಪ್ರದೇಶದಲ್ಲಿ ಸೋಮವಾರ ರಾತ್ರಿ ದಾಳಿ ನಡೆಸಿದ ನಕ್ಸಲರು, ಪೇದೆಯೊಬ್ಬರನ್ನು ಗುಂಡುಹಾರಿಸಿ ಕೊಂದಿದ್ದು, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಮೂರು ಬಸ್‌ಗಳಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ. ಇದೇ ಸಂದರ್ಭ ನಕ್ಸಲರ ಅಟ್ಟಹಾಸಕ್ಕೆ ಮೂರು ಖಾಸಗಿ ಲಾರಿಗಳೂ ಆಗ್ನಿಗಾಹುತಿಯಾಗಿವೆ.
ಕೃತ್ಯ ಎಸಗಿದ ನಂತರ ನಕ್ಸಲರು “ಇದು ತೆಲಂಗಾಣದ ಪೊಲೀಸ್ ಎನ್‌ಕೌಂಟರ್‌ಗೆ ಪ್ರತೀಕಾರ” ಎಂದು ಘೋಷಣೆ ಕೂಗಿ ಪರಾರಿಯಾಗಿದ್ದಾರೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ೧೨ ನಕ್ಸಲರನ್ನು ಹೊಡೆದುರುಳಿಸಲಾಗಿತ್ತು.

LEAVE A REPLY