ವಿಪ್ಲವ್ ಕುಮಾರ್ ದೇವ್‌ಗೆ ಒಲಿದುಬಂತು ತ್ರಿಪುರಾ ಸಿಎಂ ಪಟ್ಟ

ಅಗರ್ತಲಾ: ವಿಪ್ಲವ್ ಕುಮಾರ್ ದೇವ್‌ಗೆ ತ್ರಿಪುರಾ ಸಿಎಂ ಪಟ್ಟ ಒಲಿದು ಬಂದಿದೆ.
೪೮ ವರ್ಷದ ವಿಪ್ಲವ್ ಕುಮಾರ್ ದೇವ್ ತ್ರಿಪುರಾದ ನೂತನ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಘೋಷಿಸಿದ್ದಾರೆ. ಈ ಮೂಲಕ ತ್ರಿಪುರಾದಲ್ಲಿ ಕಮಲ ಪಕ್ಷ ಅರಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಪ್ಲವ್ ಕುಮಾರ್ ದೇವ್ ಅರ್ಹವಾಗಿಯೇ ಮುಖ್ಯಮಂತ್ರಿ ಪಟ್ಟ ಸಿಕ್ಕಿದಂತಾಗಿದೆ.
ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವಿಪ್ಲವ್, ಕಳೆದ ೨೫ ವರ್ಷಗಳ ಕಮ್ಯೂನಿಸ್ಟ್ ಪಕ್ಷದ ಕೆಂಪುಕೋಟೆಯನ್ನು ಛಿದ್ರಗೊಳಿಸಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

LEAVE A REPLY