ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಬಹುಕೋಟಿ ವಂಚನೆ ಪ್ರಕರಣ: ವಿಪುಲ್ ಚಿತ್ತಾಲೈ ಅರೆಸ್ಟ್

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮೆಹುಲ್ ಚೋಕ್ಸಿ ಆಪ್ತ, ಗೀತಾಂಜಲಿ ಗ್ರೂಪ್‌ನ ಬ್ಯಾಂಕಿಂಗ್ ವ್ಯವಹಾರಗಳ ಉಪಾಧ್ಯಕ್ಷ ವಿಪುಲ್ ಚಿತ್ತಾಲೈನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬ್ಯಾಂಕಾಕ್‌ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಹಿತಿ ತಿಳಿಯುತ್ತಿದ್ದಂತೆ ವಿಪುಲ್‌ರನ್ನು ಅಧಿಕಾರಿಗಳು ವಶಕ್ಕೆ ಪಡೆದು, ಸಿಬಿಐ ಕಚೇರಿಯಲ್ಲಿ ವಿಚಾರಣೆಗೊಳಪಡಿಸಿದ್ದಾರೆ.
೧೨,೬೦೦ ಕೋಟಿಗೂ ಅಧಿಕ ಬ್ಯಾಂಕಿಂಗ್ ಹಗರಣ ಇದಾಗಿದ್ದು, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಹಗರಣದ ರೂವಾರಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿವೆ.
ಇದೇ ಹಗರಣಕ್ಕೆ ಸಮಭಂಧಿಸಿ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೋಚರ್, ಆಕ್ಸಿಸ್ ಬ್ಯಾಂಕ್‌ನ ಶಿಖಾ ಶರ್ಮಾ ಅವರಿಗೆ ಎಸ್‌ಎಫ್‌ಐಒನಿಂದ ಸಮನ್ಸ್ ಜಾರಿ ಮಾಡಲಾಗಿದೆ.

LEAVE A REPLY