ದ್ವಿತೀಯ ಪಿಯುಸಿ ಪರೀಕ್ಷೆ : ಉಡುಪಿಯಲ್ಲಿ 191 ವಿದ್ಯಾರ್ಥಿಗಳು ಗೈರು

ಉಡುಪಿ: ಜಿಲ್ಲೆಯ ೨೭ ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಪ್ರಾರಂಭಗೊಂಡ ೨೦೧೭-೧೮ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ೧೯೧ ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷೆಯ ವೇಳೆ ಯಾವುದೇ ಅಕ್ರಮ, ಅವ್ಯವಹಾರಗಳು ನಡೆದ ವರದಿ ಇಲ್ಲ ಎಂದು ಪ.ಪೂ. ಶಿಕ್ಷಣ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಅರ್ಥಶಾಸ್ತ್ರ ಪರೀಕ್ಷೆಗೆ ೧೬೪ ಮಂದಿ ಗೈರು
ಅರ್ಥಶಾಸ್ತ್ರ ಪರೀಕ್ಷೆಗೆ ೧೬೪ ಮಂದಿ ಗೈರು ಹಾಜರಾಗಿದ್ದು, ೯೫೦೦ ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಒಟ್ಟು ೯೬೬೪ ಮಂದಿ ಹೆಸರು ನೋಂದಾಯಿಸಿದ್ದರು. ಉಡುಪಿ ತಾಲೂಕಿನಲ್ಲಿ ೭೭, ಕುಂದಾಪುರ ತಾಲೂಕಿನಲ್ಲಿ ೬೫ ಮತ್ತು ಕಾರ್ಕಳ ತಾಲೂಕಿನಲ್ಲಿ ೨೨ ಮಂದಿ ಗೈರಾಗಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಂದಿ ಗೈರು?
ಭೌತಶಾಸ್ತ್ರ ಪರೀಕ್ಷೆಗೆ ಒಟ್ಟು ೫೬೨೬ ಮಂದಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ೫೫೯೯ ಮಂದಿ ಪರೀಕ್ಷೆ ಬರೆದಿದ್ದಾರೆ. ೨೭ ಮಂದಿ ಗೈರು ಹಾಜರಾಗಿದ್ದಾರೆ. ಉಡುಪಿಯಲ್ಲಿ ೧೪, ಕುಂದಾಪುರದಲ್ಲಿ ೮ ಮತ್ತು ಕಾರ್ಕಳದಲ್ಲಿ ೫ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ.

 

LEAVE A REPLY