ತಿರುವನಂತಪುರಂ: ಸಿಪಿಎಂ ಕೋಟೆ ಗೆದ್ದ ಬಿಜೆಪಿ ಅಭ್ಯರ್ಥಿ

ತಿರುವನಂತಪುರ: ಸಿಪಿಎಂನ ಸಿಟ್ಟಿಂಗ್ ಸೀಟನ್ನೇ ಕಸಿದುಕೊಂಡು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಸಾಧನೆ ಮಾಡಿದೆ.
ತಿರುವನಂತಪುರದ ಕಾಟ್ಟಾಕಡ ವಿಧಾನಸಭಾ ಕ್ಷೇತ್ರದ ವಿಳಪ್ಪಿಲ್ ಪಂಚಾಯತ್‌ನ ನೂಲಿಯಾಡ್ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ೧೧೦ ಮತಗಳ ಭರ್ಜರಿ ಬಹುಮತದಲ್ಲಿ ತನ್ನ ಸಮೀಪದ ಇದಿರಾಳಿಯಾದ ಸಿಪಿಎಂನ ಅಭ್ಯರ್ಥಿಯನ್ನು ಬಿಜೆಪಿ ಅಭ್ಯರ್ಥಿ ಅಜಿತಾಕುಮಾರಿ ಪರಾಭವಗೊಳಿಸಿದ್ದಾರೆ. ಈ ಹಿಂದೆ ಈ ವಾರ್ಡ್‌ನಲ್ಲಿ ೧೦೦ಮತಗಳ ಅಂತರದಲ್ಲಿ ಸಿಪಿಎಂ ಅಭ್ಯರ್ಥಿ ಗೆಲುವನ್ನು ಪಡೆದಿದ್ದರು. ಅವರ ಮರಣದ ನಿಮಿತ್ತ ಈ ವಾರ್ಡ್‌ಗೆ ಉಪ ಚುನಾವಣೆ ನಡೆದಿದೆ.ಬಿಜೆಪಿಯ ಈ ಗೆಲುವು ಸಿಪಿಎಂ ಮತ್ತು ಕೇರಳ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

 

LEAVE A REPLY