ಹಲವು ಅನುಮಾನ ಹುಟ್ಟುಹಾಕಿದ ನಟಿ ಶ್ರೀದೇವಿ ದೇಹದ ಮರಣೋತ್ತರ ಪರೀಕ್ಷೆ ವರದಿ!

ಹಲವು ತಿರುವು ಪಡೆದುಕೊಂq ನಟಿ ಶ್ರೀದೇವಿ ಸಾವು ಪ್ರಕರಣ
ಹೊಸದಿಲ್ಲಿ: ದುಬೈನಲ್ಲಿ ಶನಿವಾರ ಮಧ್ಯರಾತ್ರಿ ಬಾಲಿವುಡ್ ನಟಿ ಶ್ರೀದೇವಿ ಹೃದಯ ಸ್ತಂಭನ ಸಾವನ್ನಪ್ಪಿದ ಪ್ರಕರಣ ಇದೀಗ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶ್ರೀದೇವಿ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಅದರಲ್ಲಿ ಆಕಸ್ಮಿಕವಾಗಿ ಬಿದ್ದು, ಬಾತ್‌ಟಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದಷ್ಟೇ ನಮೂದಿಸಲಾಗಿದೆ. ಇದು ಹಲವು ಸಂದೇಹಗಳಿಗೆ ಕಾರಣವಾಗಿದೆ.
ಚಿತ್ರನಟಿ ಶ್ರೀದೇವಿ ದುಬೈನ ಎಮಿರೇಟ್ಸ್ ಹೊಟೆಲ್‌ನಲ್ಲಿ ಹೃದಯ ಸ್ತಂಭನದಿಂದ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ ತದನಂತರದಲ್ಲಿ ಸಾಕಷ್ಟು ವಿದ್ಯಮಾನ ಜರುಗಿದ್ದು, ಶ್ರೀದೇವಿ ದೇಹ ಹೊಟೆಲ್ ರೂಮಿನ ಸ್ನಾನದ ಕೋಣೆಯ ಬಾತ್‌ಟಬ್‌ನಲ್ಲಿ ಕಂಡುಬಂದಿದ್ದು ವರದಿಯಾಗಿದೆ. ತದನಂತರದಲ್ಲಿ ಶವ ಪರೀಕ್ಷೆ ಕೂಡ ನಡೆದಿದ್ದು, ಅದರಲ್ಲಿ ಸಾವಿಗೆ ಕಾರಣಗಳನ್ನು ನೀಡುವ ಸಂದರ್ಭದಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಉಲ್ಲೇಖಿಸಿಲ್ಲ. ದೇಹದಲ್ಲಿ ಆಲ್ಕೋಹಾಲಿಕ್ ಅಂಶಗಳಿತ್ತು ಎಂದೂ ಹೇಲಾಗಿದೆ.
ನಂತರದಲ್ಲಿ ಶ್ರೀದೇವಿ ಸಾವಿನ ಕುರಿತು ಹಲವು ಅನುಮಾನಗಳು ಮೂಡಿವೆ. ಶ್ರೀದೇವಿ ಅವರದ್ದು ಸಹಜ ಸಾವೇ? ಅಥವಾ ಸಾವಿಗೆ ಬೇರೆ ಏನಾದರೂ ಕಾರಣಗಳಿವೆಯೇ ಎನ್ನುವ ಕುರಿತೂ ಚರ್ಚೆಗಳು ನಡೆಯುತ್ತಿವೆ.
ಈ ನಡುವೆ ನಟಿ ಶ್ರೀದೇವಿ ತಾವು ಉಳಿದುಕೊಂಡಿದ್ದ ಎಮಿರೇಟ್ಸ್ ಹೊಟೆಲ್‌ನಿಂದ ಕಳೆದ ೭೨ ಗಂಟೆಗಳಿಂದ ಹೊರಬಂದಿರಲಿಲ್ಲ ಎನ್ನುವ ಮಾಹಿತಿಗಳೂ ಲಭ್ಯವಾಗಿದೆ. ಮೂರು ದಿನಗಳ ಕಾಲ ಶ್ರೀದೇವಿ ಹೊಟೆಲ್‌ನಲ್ಲಿಯೇ ಇದ್ದರು, ಈ ಸಂದರ್ಭಗಳಲ್ಲಿ ಏನೇನು ನಡೆಯುತು ಎನ್ನುವ ಕುರಿತು ಚರ್ಚೆಗಳು ಸಾಗಿವೆ.
ದುಬೈನ ಕಾನೂನಿನ ಪ್ರಕಾರ ಶವ ಪರೀಕ್ಷೆ ಹಾಗೂ ಇತರ ತಪಾಸಣೆಗಳನ್ನು ಕೈಗೊಳ್ಳಲಾಗಿದೆ. ಆ ಪ್ರಕಾರವಾಗಿ ದುಬೈನ ವಿಧಿ ವಿಜ್ಞಾನ ಪ್ರಯೋಗಾಲಯವು ವರದಿಯನ್ನು ನೀಡಿದೆ. ಶ್ರೀದೇವಿ ಅವರ ರಕ್ತ ಪರೀಕ್ಷೆಯನ್ನೂ ಮಾಡಲಾಗಿದ್ದು, ರಕ್ತದಲ್ಲಿ ಮದ್ಯದ ಅಂಶಗಳು ತೀವ್ರವಾಗಿರುವುದು ಪತ್ತೆಯಾಗಿದೆ. ಮದ್ಯದ ಪ್ರಭಾವದಿಂದಾಗಿ ಸ್ನಾನಗೃಹದಲ್ಲಿ ಆಯತಪ್ಪಿ ಬಿದ್ದು, ಟಬ್‌ನಲ್ಲಿ ಮುಳುಗಿ ಉಸಿರು ಕಟ್ಟಿ ಸಾವನ್ನಪ್ಪಿರಬೇಕು ಎಂದು ದುಬೈನ ಖಲೀಜ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಮರಣೋತ್ತರ ಪರೀಕ್ಷೆಯ ಪ್ರತಿಯನ್ನು ಶ್ರೀದೇವಿ ಕುಟುಂಬದ ಸದಸ್ಯರಿಗೆ ನೀಡಲಾಗಿದೆ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇತರ ಸುದ್ದಿ ವಾಹಿನಿಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶ್ರೀದೇವಿ ಸಾವಿಗೂ ಮೋದಲು ನಡೆದಿದ್ದಾದರೂ ಏನು ಎಂದು ಪ್ರಶ್ನಿಸುವಂತಾಗಿದೆ.
೫೪ ವರ್ಷ ವಯಸ್ಸಿನ ಶ್ರೀದೇವಿ ಅವರು ಕುಟುಂಬದ ಸದಸ್ಯರೊಂದಿಗೆ ನಟ ಮೋಹಿತ್ ಮಾರ್ವಾ ಅವರ ವಿವಾಹದಲ್ಲಿ ಪಾಲ್ಗೊಳ್ಳುವ ಸಲುವಾಗಿ ದುಬೈಗೆ ತೆರಳಿದ್ದರು. ಶನಿವಾರ ಮಧ್ಯರಾತ್ರಿ ಶ್ರೀದೇವಿ ಹೃದಯಸ್ಥಂಭನದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದವು.

LEAVE A REPLY