ಆಂಧ್ರದಲ್ಲಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ 55,000 ಕೋಟಿ ಹೂಡಿಕೆ!

ವಿಶಾಖಪಟ್ಟಣಂ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಅದರ ಪಾಲುದಾರರು ಆಂಧ್ರದಲ್ಲಿ ೫೫,೦೦೦ ಕೋಟಿ ರೂ. ಹೂಡಿಕೆಯನ್ನು ಮಾಡಲಿದೆ. ಆಂಧ್ರಪ್ರದೇಶ ವಿವಿಧ ವಲಯಗಳ ವಿವಿಧ ಕಂಪೆನಿಗಳಿಂದ ಒಟ್ಟು ೧.೭೫ ಲಕ್ಷ ಕೋಟಿ ರೂ. ಹೂಡಿಕೆ ಬದ್ಧತೆ ಸ್ವೀಕರಿಸಿದೆ.
ರಿಲಯನ್ಸ್ ಹಾಗೂ ಅದರ ಪಾಲುದಾರರು ವಿದ್ಯುತ್, ಇಲೆಕ್ಟ್ರಾನಿಕ್ ಉತ್ಪಾದನೆ, ಡಿಜಿಟಲ್ ಮೂಲಸೌಕರ್ಯ ಹಾಗೂ ಇತರ ಕ್ಷೇತ್ರಗಳಲ್ಲಿ ಮುಂದಿನ ೫ ವರ್ಷಗಳ ಕಾಲ ಹೂಡಿಕೆ ನಡೆಸಲಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

LEAVE A REPLY