ಶಿವಸೇವೆ, ಹಿಂದು ಮಹಾಸಭಾದ ಬೆಂಬಲದೊಂದಿಗೆ ಚುನಾವಣೆಯನ್ನು ಎದುರಿಸುತ್ತೇವೆ: ಮುತಾಲಿಕ್

ಉಡುಪಿ: ಕರ್ನಾಟಕದಲ್ಲಿ ಶಿವಸೇವೆ, ಹಿಂದು ಮಹಾಸಭಾದ ಬೆಂಬಲದೊಂದಿಗೆ ಹಿಂದುತ್ವದ ಆಧಾರದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ಶೃಂಗೇರಿ ಅಥವಾ ಬಾಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಿಂದ ರ್ಸ್ಪಸುತ್ತೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಭಾನುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಉದ್ಘಾಟನೆಗೊಂಡ ಶಿವಸೇನೆಗೆ ರಾಜ್ಯಾದ್ಯಂತ ಶ್ರೀರಾಮ ಸೇನೆ ಬೆಂಬಲ ನೀಡುತ್ತದೆ. ಕರ್ನಾಟಕ ಶಿವಸೇನೆಯ ಅಧ್ಯಕ್ಷ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶ್ರೀಸಿದ್ದಲಿಂಗ ಸ್ವಾಮೀಜಿ ಜೇವರ್ಗಿ ಕ್ಷೇತ್ರದಲ್ಲಿ ರ್ಸ್ಪಸುತ್ತಾರೆ. ರಾಜ್ಯದಲ್ಲಿ ಸಂಘಟನೆ ಬಲವಿರುವ ೫೨ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ ಎಂದರು.
ಶೃಂಗೇರಿ ಕ್ಷೇತ್ರದ ಕಾರ್ಯಕರ್ತರ ಜೊತೆಗೆ ಶನಿವಾರ ಸಮಾಲೋಚನೆ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೇ ರೀತಿ ತೇರದಾಳ ಕ್ಷೇತ್ರದ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡಿ ನಾನು ಯಾವ ಕ್ಷೇತ್ರದಿಂದ ರ್ಸ್ಪಸಬೇಕು ಎಂಬ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದ ಅವರು, ಮರಾಠಿ ಮಹಾರಾಷ್ಟ್ರ ಶಿವಸೇನೆಗೆ ಎಷ್ಟು ಮುಖ್ಯವೋ ಅದೇ ರೀತಿ ಕನ್ನಡ ನೆಲ-ಜಲ, ಭಾಷೆಗೆ ಸಂಬಂಸಿದಂತೆ ನಾವು ಬದ್ಧರಾಗಿದ್ದೇವೆ. ಶಿವಸೇನೆಯಿಂದ ಕನ್ನಡಕ್ಕೆ ಯಾವುದೇ ರೀತಿಯ ಹೊಡೆತ ಬೀಳದಂತೆ ಕರ್ನಾಟಕದ ಶಿವಸೇನೆ ಕಾರ್ಯಾಚರಿಸಲಿದೆ ಎಂದು ಸ್ಪಷ್ಟಪಡಿಸಿದರು.

LEAVE A REPLY