60 ಮೀ ವಿಶ್ವ ದಾಖಲೆ ಮುರಿದ ಎರಡು ಬಾರಿಯ ವಿಶ್ವ ಬೆಳ್ಳಿ ಪದಕ ವಿಜೇತ ಕ್ರಿಸ್ಟಿಯನ್

ದಕ್ಷಿಣ ಕ್ಯಾರೊಲಿನಾ: ಎರಡು ಬಾರಿಯ ವಿಶ್ವ ಬೆಳ್ಳಿ ಪದಕ ವಿಜೇತ ಕ್ರಿಸ್ಟಿಯನ್ ಕೋಲ್‌ಮನ್ ಅವರು ಶುಕ್ರವಾರ ಕೇವಲ ೬.೩೭ ಸೆಕೆಂಡುಗಳಲ್ಲಿ ೬೦ ಮೀಟರ್ ಕ್ರಮಿಸುವ ಮೂಲಕ ಈ ಹಿಂದಿನ ೬೦ ಮೀಟರ್ ಓಟದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಆ ಮೂಲಕ ನೂತನ ವಿಶ್ವದಾಖಲೆ ಸೃಷ್ಟಿಸಿದ್ದಾರೆ.
೨೧ರ ಹರೆಯದ ಕ್ರಿಸ್ಟಿಯನ್ ಜಾಗತಿಕ ಓಟದಲ್ಲಿ ಎರಡು ದಶಕ ಹಳೆಯದಾದ ೬೦ ಮೀಟರ್ ಓಟದ ವಿಶ್ವದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದರು. ಇದು ನನ್ನ ವೃತ್ತಿಜೀವನಕ್ಕೆ ಅತ್ಯುತ್ತಮ ಆರಂಭ ಎಂದು ಅವರು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕ್ಯಾರೊಲಿನಾದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಭಾಗವಹಿಸಿದ್ದರು. ಇದು ಅವರ ಪೂರ್ಣ ಪ್ರಮಾಣದ ವೃತ್ತಿಜೀವನದ ಮೊದಲ ವರ್ಷವಾಗಿದೆ.

 

LEAVE A REPLY