4 ರಾಷ್ಟ್ರಗಳ ಆಹ್ವಾನಿತ ಹಾಕಿ ಸೆಮಿಫೈನಲ್ : 3-1 ರಿಂದ ಗೆದ್ದ ಭಾರತ

ಟೌರಂಗಾ: ರಚನಾತ್ಮಕ ರಕ್ಷಣೆ ಹಾಗೂ ಸಮರ್ಥ ಆಕ್ರಮಣದಿಂದ ಭಾರತೀಯ ಪುರುಷರ ಹಾಕಿ ತಂಡ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಪಂದ್ಯಾವಳಿ ಸೆಮಿಫೈನಲ್‌ನಲ್ಲಿ ೩-೧ ಅಂತರದ ಗೆಲುವು ಸಾಧಿಸಿದೆ.
ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡನ್ನು ಪರಾಭವಗೊಳಿಸಿದ ಭಾರತ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಜಪಾನನ್ನು ೪-೧ರಿಂದ ಸೋಲಿಸಿ ಫೈನಲ್ ಸೇರಿದ ಬೆಲ್ಜಿಯಂನ್ನು ಭಾನುವಾರ ನಡೆಯುವ ಫೈನಲ್‌ನಲ್ಲಿ ಭಾರತ ಎದುರಿಸಲಿದೆ.
ಶನಿವಾರ ಟೌರಂಗಾದ ಬ್ಲೇಕ್ ಪಾರ್ಕ್ ನಲ್ಲಿ ನಡೆದ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ಭಾರತದ ಪರ ಹರ್ಮನ್‌ಪ್ರೀತ್ ೨ನೇ ನಿಮಿಷದಲ್ಲಿ, ದಿಲ್‌ಪ್ರೀತ್ ಸಿಂಗ್ ೧೨ನೇ ನಿಮಿಷದಲ್ಲಿ ಹಾಗೂ ಮನ್‌ದೀಪ್ ಸಿಂಗ್ ೪೭ನೇ ನಿಮಿಷದಲ್ಲಿ ಗೋಲ್ ಹೊಡೆದರು. ನ್ಯೂಜಿಲ್ಯಾಂಡ್‌ನ ಕೇನ್ ರಸೆಲ್ ೪೨ನೇ ನಿಮಿಷದಲ್ಲಿ ಗೋಲ್ ಹೊಡೆದರು. ಇದು ನ್ಯೂಜಿಲ್ಯಾಂಡ್‌ನ ಏಕೈಕ ಗೋಲ್.
ಕಳೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಭಾರತ ೦-೨ ಅಂತರದಿಂದ ಸೋಲು ಕಂಡಿತ್ತು. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ೩-೧ ಅಂತರದ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಪುಟಿದು ಎದ್ದುನಿಂತಿದೆ.
ಭಾರತದ ಮೊದಲ ಗೋಲ್: ಭಾರತ ತಂಡಕ್ಕೆ ಪಂದ್ಯದ ೨ನೇ ನಿಮಿಷದಲ್ಲಿಯೇ ಮೊದಲ ಬ್ರೇಕ್ ಸಿಕ್ಕಿತು. ಪಂದ್ಯದ ೨ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಸೃಷ್ಟಿಸಿದ ಪೆನಾಲ್ಟಿ ಕಾರ್ನರ್‌ನಿಂದ ಭಾರತಕ್ಕೆ ಲಾಭವಾಯಿತು.
ಡ್ರ್ಯಾಗ್ ಫ್ಲಿಕ್ ಮಾಡಲು ಹರ್ಮನ್‌ಪ್ರೀತ್ ಮುಂದಾದರು. ಹರ್ಮನ್‌ಪ್ರೀತ್ ಮಾಡಿದ ಅತ್ಯದ್ಭುತ ಡ್ರ್ಯಾಗ್ ಫ್ಲಿಕ್ ನ್ಯೂಜಿಲ್ಯಾಂಡ್ ಗೋಲ್ ಕೀಪರ್ ರಿಚರ್ಡ್ ಜೋಯ್ಸ್ ಅವರಿಗೆ ತಡೆಯಲು ಸಾಧ್ಯವಾಗಲಿಲ್ಲ. ಆ ಮೂಲಕ ಮೊದಲ ೨ ನಿಮಿಷದಲ್ಲಿ ಭಾರತ ತನ್ನ ಗೋಲ್ ಖಾತೆಯನ್ನು ತೆರೆಯಿತು. ಭಾರತ ತಂಡ ೧-೦ ಮುನ್ನಡೆ ಸಾಧಿಸಿತು.
ಭಾರತದ ೨ನೇ ಗೋಲ್: ಭಾರತದಿಂದ ದಾಖಲಾದ ವೇಗದ ಮೊದಲ ಗೋಲ್‌ನಿಂದ ನ್ಯೂಜಿಲ್ಯಾಂಡ್ ತಂಡವನ್ನು ಒತ್ತಡಕ್ಕೆ ತಳ್ಳಿತು. ಮುಂದಿನ ಕೆಲವು ನಿಮಿಷಗಳಲ್ಲಿ ಭಾರತದ ಅತ್ಯುತ್ತಮ ರಕ್ಷಣಾ ಸಾಮರ್ಥ್ಯವು ನ್ಯೂಜಿಲ್ಯಾಂಡ್ ಅನುಭವಕ್ಕೆ ಬಂತು. ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ರಕ್ಷಣಾ ಆಟಗಾರ ರೂಪಿಂದರ್ ಸಿಂಗ್ ತಮ್ಮ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಿದರು. ನ್ಯೂಜಿಲ್ಯಾಂಡ್ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಭಾರತದ ರಕ್ಷಣಾ ಆಟಗಾರರು ಒದಗಿಸಲಿಲ್ಲ.
ರಾಷ್ಟ್ರೀಯ ತಂಡಕ್ಕಾಗಿ ಆಡಿದ ಮೊದಲ ಪಂದ್ಯದಲ್ಲಿ ೨ ಗೋಲ್ ಹೊಡೆದಿದ್ದ,
ಅನನುಭವಿ ಯುವ ಆಟಗಾರ ದಿಲ್‌ಪ್ರೀತ್ ಸಿಂಗ್ ಅವರು ಮನತಟ್ಟುವ ಆಟದ ಪ್ರದರ್ಶನ ನೀಡಿದರು. ಅವರು ಪಂದ್ಯದ ೨೧ನೇ ನಿಮಿಷದಲ್ಲಿ ಗೋಲ್ ಹೊಡೆಯುವ ಮೂಲಕ ಭಾರತಕ್ಕೆ ಮಹತ್ವದ ೨-೦ ಮುನ್ನಡೆಯನ್ನು ಒದಗಿಸಿದರು.
ನ್ಯೂಜಿಲ್ಯಾಂಡ್ ಮೊದಲ ಗೋಲ್: ಭಾರತ ತಂಡ ಉತ್ತಮವಾಗಿ ಆಡುತ್ತ ತನ್ನ ಮುನ್ನಡೆಯನ್ನು ಹೆಚ್ಚಿಸುವಲ್ಲಿ ಪ್ರಯತ್ನಿಸುತ್ತಿದ್ದರೂ, ೪೨ನೇ ನಿಮಿಷದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್‌ಗೆ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಒದಗಿಸಿತು. ಭಾರತ ತಂಡ ಒದಗಿಸಿದ ಈ ಅವಕಾಶವನ್ನು ನ್ಯೂಜಿಲ್ಯಾಂಡ್‌ನ ಕೇನ್ ರಸೆಲ್ ಅತ್ಯುತ್ತಮವಾಗಿ ಕಾರ್ಯರೂಪಕ್ಕೆ ತಂದರು. ೪೨ನೇ ನಿಮಿಷದಲ್ಲಿ ಗೋಲ್ ಬಾರಿಸುವ ಮೂಲಕ ನ್ಯೂಜಿಲ್ಯಾಂಡ್‌ಗೆ ಮಹತ್ವದ ೧-೨ ಅಂತರವನ್ನು ಕೇನ್ ಮಾಡಿಕೊಟ್ಟರು.
ಭಾರತದ ೩ನೇ ಗೋಲ್: ೪೭ನೇ ನಿಮಿಷದಲ್ಲಿ ಭಾರತದ ಪರವಾಗಿ ಯುವ ಆಟಗಾರ ಮನ್‌ದೀಪ್ ಸಿಂಗ್.

 

LEAVE A REPLY