ಡಿ.31ರ ಬಳಿಕ ಅಮಾನ್ಯವಾಗುತ್ತೆ ಎಸ್‌ಬಿಐ ಅಸೋಸಿಯೇಟ್ ಬ್ಯಾಂಕ್‌ಗಳ ಚೆಕ್ ಬುಕ್!

ಹೊಸದಿಲ್ಲಿ: ಎಸ್‌ಬಿಐನ ಅಸೋಸಿ ಯೇಟ್ ಭಾರತೀಯ ಮಹಿಳಾ ಬ್ಯಾಂಕ್,
ಪಟಿಯಾಲ ಸ್ಟೇಟ್ ಬ್ಯಾಂಕ್, ಮೈಸೂರು ಸ್ಟೇಟ್ ಬ್ಯಾಂಕ್, ಬಿಕನೇರ್ ಮತ್ತು ಜೈಪುರ ಸ್ಟೇಟ್ ಬ್ಯಾಂಕ್, ರಾಯ್‌ಪುರ್ ಸ್ಟೇಟ್ ಬ್ಯಾಂಕ್, ಟ್ರಾವಂಕೂರ್ ಸ್ಟೇಟ್ ಬ್ಯಾಂಕ್ ಹಾಗೂ ಹೈದರಾಬಾದ್ ಸ್ಟೇಟ್ ಬ್ಯಾಂಕ್‌ಗಳ ಚೆಕ್ ಪುಸ್ತಕಗಳ ಡಿ.೩೧ರ ಬಳಿಕ ಕೆಲಸ ಮಾಡುವುದಿಲ್ಲ.
ಈ ಎಲ್ಲಾ ಮೇಲಿನ ಬ್ಯಾಂಕ್‌ಗಳ ಖಾತೆದಾರರಿಗೆ ನೂತನ ಐಎಫ್‌ಎಸ್‌ಸಿ ಕೋಡ್ ಹೊಂದಿರುವ ಹೊಸ ಚೆಕ್ ಪುಸ್ತಕ ಸಿಗಲಿದೆ. ವಿಲೀನ ಪ್ರಕ್ರಿಯೆ ಬಳಿಕ, ಎಸ್‌ಬಿಐ ಅಸೋಸಿಯೇಟ್ ಬ್ಯಾಂಕ್‌ಗಳ ಚೆಕ್ ಪುಸ್ತಕಗಳು ಸೆ.೩೦ರಂದು ಅಮಾನ್ಯವಾಗಬೇಕಿತ್ತು. ಆದರೂ ಎಸ್‌ಬಿಐ, ಡಿ.೩೧ರ ತನಕ ಹೊಸ ಚೆಕ್ ಪುಸ್ತಕ ಪಡೆದು ಕೊಳ್ಳಲು ಸಮಯ ನೀಡಲು ಅಮಾನ್ಯ ಮಾಡುವ ದಿನವನ್ನು ವಿಸ್ತರಿಸಿದೆ.
ಹೊಸ ಚೆಕ್ ಬುಕ್ ಹೇಗೆ ಪಡೆದು ಕೊಳ್ಳುವುದು ?
ಹೊಸ ಚೆಕ್ ಬುಕ್ಗಳನ್ನು ಪಡೆದುಕೊಳ್ಳಲು ಗ್ರಾಹಕರು ಸಮೀಪದ ಎಸ್‌ಬಿಐ ಶಾಖೆಗೆ ತೆರಳಬೇಕು ಅಥವಾ ಎಟಿಎಂ ಬಳಸಬೇಕು,ಬ್ಯಾಂಕ್‌ನ ಮೊಬೈಲ್ ಆಪ್ ಬಳಸಬೇಕು. ವಿಲೀನದ ಬಳಿಕ ನೆಟ್‌ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಲು ವೆಬ್‌ಸೈಟ್ ಲಿಂಕ್ ಸಹಾಯ ಮಾಡುವುದು.
ಒಂದು ವೇಳೆ ನೀವು ಅಸೋಸಿಯೇಟ್ ಬ್ಯಾಂಕ್ ಗ್ರಾಹಕರಾಗಿದ್ದರೆ, ನೀವು ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಲಾಗ್- ಇನ್ ಯೂಸರ್ ನೇಮ್, ಲಾಗ್-ಇನ್ ಪಾಸ್‌ವರ್ಡನ್ನು ವೆಬ್‌ಸೈಟ್‌ನಲ್ಲಿ ಬಳಸಬಹುದು.
ಎಸ್‌ಬಿಐ ಬ್ಯಾಂಕ್‌ಗಳ ಬಳಿಕ, ತನ್ನ ೧,೩೦೦ ಶಾಖೆಗಳ ಹೆಸರುಗಳನ್ನು ಹಾಗೂ ಐಎಫ್‌ಎಸ್‌ಸಿ ಕೋಡ್‌ಗಳನ್ನು ಎಸ್‌ಬಿಐ  ಬದಲಾವಣೆ ಮಾಡಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಮುಂಬೈ, ಹೊಸದಿಲ್ಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ ಹಾಗೂ ಲಕ್ನೋ ಹಾಗೂ ಇನ್ನಿತರ ಪ್ರಮುಖ ನಗರಗಳಲ್ಲಿ ತನ್ನ ೧,೩೦೦ರಷ್ಟು ಶಾಖೆಗಳ ಹೆಸರುಗಳನ್ನು ಮತ್ತು ಐಎಫ್‌ಎಸ್‌ಸಿ ಕೋಡ್‌ಗಳನ್ನು ಬದಲಾಯಿಸಿದೆ.
ಭಾರತೀಯ ಹಣಕಾಸು ವ್ಯವಸ್ಥೆ ಕೋಡ್ ಅಥವಾ ಐಎಫ್‌ಎಸ್‌ಸಿ ೧೧ ಅಂಕೆಗಳ ಆಲ್ಫಾ ನ್ಯೂಮರಿಕ್ ಕೋಡ್ ಆಗಿದ್ದು, ಇದು ಆರ್‌ಬಿಐನ ನಿಧಿ ವರ್ಗಾವಣೆ ವ್ಯವಸ್ಥೆಯಲ್ಲಿ ಭಾಗಿ ಯಾಗುವ ಬ್ಯಾಂಕ್‌ಗಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ.