ಮಾಧ್ಯಮ ಪ್ರಚಾರ ಹೊರತೂ ಗುಜರಾತ್‌ನಲ್ಲಿ ಕೈ ಗೆಲ್ಲಲಸಾಧ್ಯ!

ಗುಜರಾತ್‌ನಲ್ಲಿ ಈ ಬಾರಿ ಬಿಜೆಪಿ ಸೋಲುವಂತೆ ಮಾಡಬೇಕು, ಕನಿಷ್ಠ ಸೋಲ ದಿದ್ದರೆ ಸ್ಥಾನಗಳಾದರೂ ಸ್ವಲ್ಪ ಕಡಿಮೆ ಬರುವಂತೆ ಮಾಡಬೇಕು . ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಬಲವನ್ನು ಕುಂದಿಸಬೇಕು ಎಂಬ ಗುರಿಯೊಂದಿಗೆ ಅಂತಾರಾಷ್ಟ್ರೀಯ ಹಿತಾಸಕ್ತಿಗಳು ಸೇರಿದಂತೆ ವಿವಿಧ ಶಕ್ತಿಗಳು ಶಕ್ತಿಮೀರಿ ಶ್ರಮಿಸುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಪುಷ್ಟಿ ನೀಡುವಂತೆ, ಮಾಧ್ಯಮ ವರ್ಗವೊಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ವೈಭವೀಕರಿಸಿ ಭಾರೀ ಪ್ರಚಾರ ನೀಡುತ್ತಿದೆ.
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏರಲು ಸಜ್ಜಾಗಿರಬಹುದು .ಹಾಗೆಂದು ಅವರೊಬ್ಬ ಪ್ರಬುದ್ಧ ನಾಯಕರಾಗಿದ್ದಾರೆ ಎಂಬುದಕ್ಕೆ ಯಾವುದೇ ವಾಸ್ತವಿಕ ಆಧಾರಗಳು ಲಭಿಸುತ್ತಿಲ್ಲ. ಇಂದಿಗೂ ರಾಹುಲ್ ಗಾಂಧಿಯವರಾಗಲಿ, ಸೋನಿಯಾ ಗಾಂಧಿಯವರಾಗಲಿ ಎಲ್ಲೂ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ-ಪ್ರಶ್ನೆಗಳಿಗೆ ಮುಖಾಮುಖಿಯಾಗಿದ್ದಿಲ್ಲ. ಎಂತಹ ಅಚ್ಚರಿ ಎಂದರೆ, ನಮ್ಮ ಒಂದು ವರ್ಗದ ಮಾಧ್ಯಮ,  ಸಾರ್ವಜನಿಕವಾಗಿ ಇನ್ನಿಲ್ಲದ ಟೀಕೆ, ನಿಂದಾಸತ್ರಗಳನ್ನು ಎದುರಿಸಿದ ಪ್ರಧಾನಿ ಮೋದಿಯವರು ಮಾಧ್ಯಮಕ್ಕೆ ಬೆನ್ನುಹಾಕಿದ್ದಾರೆ ಎಂದು ಟೀಕಿಸುತ್ತಿದೆ.ಅದೇ ರಾಹುಲ್ ಗಾಂಧಿಯವರನ್ನು ಮುಖಾಮುಖಿ ಚರ್ಚೆಗೆ ಎಳೆಯಲು ಮಾತ್ರ ಮುಂದಾಗುತ್ತಿಲ್ಲ !ವಿವಿಗಳಲ್ಲಿ ರಾಹುಲ್ ಅವರ ‘ಸಂವಾದ ಕಾರ್ಯಕ್ರಮ’ ಎಂತೆಂತಹ ಪ್ರಹಸನದಲ್ಲಿ ಅಂತ್ಯಗೊಳ್ಳುತ್ತಿವೆ ಎಂಬುದನ್ನು ನೋಡಿದ್ದೇವೆ. ಗಾಂಧಿ ಕುಟುಂಬಕ್ಕೆ ಕಾಂಗ್ರೆಸಿಗರು ಬದ್ಧತೆ ತೋರುವುದನ್ನು ಪಕ್ಷನಿಷ್ಠೆ ಎನ್ನಬಹುದು. ಆದರೆ ಎಲ್ಲವನ್ನೂ ಪ್ರಶ್ನೆ ಮಾಡಬೇಕು , ಪ್ರಶ್ನೆ ಮಾಡುವುದು ಪತ್ರಿಕೋದ್ಯಮದ ಜೀವಂತಿಕೆ ಎಂದೆಲ್ಲ ಹೇಳುವ ಈ ವರ್ಗದ ಮಾಧ್ಯಮ ಇಂತಹ ಮುಲಾಜು ತೋರುತ್ತಿರುವುದರ ಹಿನ್ನೆಲೆ ಏನು?ಅರ್ಥವಾಗದ ಯಕ್ಷಪ್ರಶ್ನೆಯಿದು.
ಭೂಕಂಪದಿಂದ ತತ್ತರಿಸಿದ ಗುಜರಾತನ್ನು ಮತ್ತೆ ಅತ್ಯದ್ಭುತವಾಗಿ ಕಟ್ಟಿನಿಲ್ಲಿಸಿದ ಪ್ರಮತ್ತು ತಮ್ಮ ಅಭಿವೃದ್ಧಿಗೆ ಬೇಕಾದ ಶಾಶ್ವತ ಯೋಜನೆಗಳನ್ನು ರೂಪಿಸಿದ್ದು ಪ್ರಧಾನಿ ಮೋದಿ ಮತ್ತು ಗುಜರಾತ್ ಬಿಜೆಪಿ ಸರಕಾರ.ಇದನ್ನು ಗುಜರಾತ್ ಜನತೆ ಮರೆಯಲು ಕಾರಣವಿಲ್ಲ.
ಇಷ್ಟಾಗಿಯೂ , ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ, ಕೈ ಪಾಳಯದಲ್ಲಿ ಹತಾಶೆ ಮೂಡಿರುವುದು ಎದ್ದು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ನೀಚ ಎಂದು ನಿಂದಿಸಿದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರನ್ನು ಅಮಾನತುಗೊಳಿಸಿರುವುದು ಮತ್ತು    ಕುಟಿಲತೆ, ಸುಳ್ಳನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಇನ್ನೊಬ್ಬ ಕಾಂಗ್ರೆಸ್ ನಾಯಕ  ಕಪಿಲ್ ಸಿಬಲ್ ಅವರನ್ನು ಗುಜರಾತಿನತ್ತ ತಲೆಹಾಕಬೇಡಿ ಎಂದು ಸೂಚಿಸಿರುವುದು ಇದಕ್ಕೆ ಸಾಕ್ಷಿ.

LEAVE A REPLY