ಸುಖೋಯ್ ಯುದ್ಧ ವಿಮಾನದಿಂದ ಬ್ರಹ್ಮೋಸ್ ಉಡಾವಣೆ : ವಾಯು ಪಡೆ ಸಾಮರ್ಥ್ಯ ಹೆಚ್ಚಳ

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಭಾರತೀಯ ವಾಯು ಪಡೆಯ ಸುಖೋಯ್-೩೦ ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಈ ಮೂಲಕ ದೇಶದ ವೈಮಾನಿಕ ಪರಾಕ್ರಮ ಗಣನೀ ಯವಾಗಿ ಹೆಚ್ಚಿದಂತಾಗಿದೆ. ಸಶಸ್ತ್ರ ಪಡೆಗಳು ಇದೀಗ ೨೯೦ ಕಿಮೀ ದೂರದ ಕ್ರಮಿಸಬಲ್ಲ ಬ್ರಹ್ಮೋಸ್ ಉಡಾವಣೆಗೆ ಸಮರ್ಥವಾಗಿದೆ. ಅಲ್ಲದೆ, ಇದು ಭೂಮಿ, ಜಲ ಮತ್ತು ವಾಯುವಿನಿಂದ ಉಡಾವಣೆ ಮಾಡಬಲ್ಲ ಜಗತ್ತಿನ ಅತ್ಯಂತ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕ್ಷಿಪಣಿಯು ಯುದ್ಧ ವಿಮಾನದಿಂದ ಉಡಾವ ಣೆಗೊಂಡು ಬಂಗಾಳ ಕೊಲ್ಲಿಯಲ್ಲಿ ನಿಗದಿಪಡಿಸಲಾಗಿದ್ದ ಸಮುದ್ರ ಮೂಲದ ಗುರಿಯನ್ನು ಅಪ್ಪಳಿಸಿದೆ. ಭೂಮಿ ಮತ್ತು ಯುದ್ಧನೌಕೆ ಆವೃತ್ತಿಯ ಕ್ಷಿಪಣಿ ಈಗಾಗಲೇ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಂಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿತು.
ಮೊದಲ ಬಾರಿಗೆ ಸುಖೋಯ್-೩೦ಎಂಕೆಐ ಯುದ್ಧ ವಿಮಾನದಿಂದ ಯಶಸ್ವಿಯಾಗಿ ಉಡಾವಣೆಗೊಂಡು ಬಂಗಾಳಕೊಲ್ಲಿಯಲ್ಲಿನ ನಿಗದಿತ ಗುರಿ ಅಪ್ಪಳಿಸುವ ಮೂಲಕ ಇಂದು ಇತಿಹಾಸ ಸೃಷ್ಟಿಸಿದೆ ಎಂದು ರಕ್ಷಣಾ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಗುರುತ್ವಾಕರ್ಷಣೆ ರಹಿತ ೨.೫ ಟನ್ ತೂಕದ ಕ್ಷಿಪಣಿಯು ಸು-೩೦ ಯುದ್ಧ ವಿಮಾನದಿಂದ ಉಡಾವಣೆಗೊಂಡಿದ್ದು, ಎರಡು ಹಂತದ ಎಂಜಿನ್ ಹೊಂದಿದ್ದ ಕ್ಷಿಪಣಿ ನೇರವಾಗಿ ಸಮುದ್ರದಲ್ಲಿನ ನಿಗದಿತ ಗುರಿಗೆ ಅಪ್ಪಳಿಸಿತು.
ಸುಖೋಯ್ ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯು ಯಶಸ್ವಿಯಾಗಿ ಉಡಾವಣೆಗೊಂಡಿದ್ದು ಆ ಮೂಲಕ ಭಾರತ ಜಾಗತಿಕ ದಾಖಲೆ ಸೃಷ್ಟಿಸಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರು ಈ ಐತಿಹಾಸಿಕ ಸಾಧನೆಗಾಗಿ, ಬ್ರಹ್ಮೋಸ್ ತಂಡ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿಗಳನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

LEAVE A REPLY